ಬೆಳ್ಳಾರೆ : ಧನಲಕ್ಷ್ಮೀ ಸ್ತ್ರೀಶಕ್ತಿ ಗೊಂಚಲು ಸಮಿತಿ ಮಹಾಸಭೆ

Advt_Headding_Middle

 

 

ಧನಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ಬೆಳ್ಳಾರೆ ಇದರ ಮಹಾಸಭೆಯು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಡಿ.18 ರಂದು ನಡೆಯಿತು.


ಗೊಂಚಲು ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ ರವರು ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಉಷಾ ಎಂ ಪ್ರಸಾದ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿಯಾದ ಶ್ರೀಮತಿ ದೇವಕಿ ಗೊಂಚಲಿನ ವರದಿ ವಾಚಿಸಿದರು ನಂತರ 2022- 2023 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಸುಜಾತ ಜನಾರ್ಧನ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕಲ್ಲೋಣಿ ಕಾರ್ಯದರ್ಶಿಯಾಗಿ ದಿವ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘ ಪೆರುವಾಜೆ ಜೊತೆ ಕಾರ್ಯದರ್ಶಿಯಾಗಿಉಷಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ನೆಟ್ಟಾರು ಆಯ್ಕೆಯಾಗಿದ್ದಾರೆ. ಕುಮಾರಿ ಪ್ರಿಯದರ್ಶಿನಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಹೊನ್ನಮ್ಮ,
ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೌರಿ ನೆಟ್ಟಾರು ಉಪಸ್ಥಿತರಿದ್ದರು.
ಮಹಿಳೆಯರ ದೌರ್ಜನ್ಯದ ಬಗ್ಗೆ ಬೆಳ್ಳಾರೆ ಠಾಣೆಯ ಎಸ್.ಐ.ಆಂಜನೇಯ ರೆಡ್ಡಿಯವರು ಮಾಹಿತಿ ನೀಡಿದರು.
ಶ್ರೀಮತಿ ದಿವ್ಯ ಸ್ತ್ರೀ ಶಕ್ತಿ ಸಂಘ ಪಾಟಾಜೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ನೆಟ್ಟಾರು ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು ಪ್ರಾರ್ಥಿಸಿದರು .
ವಸಂತಿ ಪಾಟಾಜೆ ಸ್ವಾಗತಿಸಿ ಸುಜಾತ ಕಲ್ಲೋಣಿ ವಂದಿಸಿದರು.
ಬೆಳ್ಳಾರೆ ಮತ್ತು ಪೆರುವಾಜೆ ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರು ಮತ್ತು ಎಲ್ಲಾ ಸ್ತ್ರೀಶಕ್ತಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.