ಎಂ. ಬಿ. ಎ. ಪದವಿಯಲ್ಲಿ ಸುಳ್ಯದ ನೇಹಾ ದೇವರವರಿಗೆ ರ‍್ಯಾಂಕ್‌ 

Advt_Headding_Middle
Advt_Headding_Middle

 

 

ಬೆಂಗಳೂರಿನ ಎಂ. ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜನವರಿ 5 ರಂದು 13 ನೇ ಘಟಿಕೋತ್ಸವ ನಡೆಯಿತು.

ಕರ್ನಾಟಕದ ಈ ಪ್ರತಿಷ್ಠಿತ ವಿದ್ಯಾಸಂಸ್ಥೆಯಿಂದ ಸುಳ್ಯದ ಕುಮಾರಿ ನೇಹಾ ದೇವ ಅವರು ತಮ್ಮ ಎಂ.ಬಿ.ಎ ಪದವಿಯನ್ನು ವ್ಯಾಸಂಗ ಮಾಡಿ 2021 ನೇ ಸಾಲಿನಲ್ಲಿ ತೃತೀಯ ರ‍್ಯಾಂಕ್‌ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಾಮಯ್ಯ ತಾಂತ್ರಿಕ ವಿದ್ಯಾಲಯದ 13 ನೇ ಘಟಿಕೋತ್ಸವ ಸಮಾರಂಭದಲ್ಲಿ ದೆಹಲಿಯ ರಾಷ್ಟ್ರೀಯ ಮಾನ್ಯತಾ ಮಂಡಳಿಯ(ಎನ್. ಬಿ. ಎ) ಅಧ್ಯಕ್ಷ ಪ್ರೊ. ಕೆ. ಕೆ. ಅಗರ್ವಾಲ್ ಅವರಿಂದ ಕುಮಾರಿ ನೇಹಾ ದೇವ ಅವರು ಕಂಚಿನ ಪದಕ ಮತ್ತು ಪದವಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಇವರು ಸುಳ್ಯದ ನಿವೃತ್ತ ಬ್ಯಾಂಕ್ ಪ್ರಬಂಧಕ  ಶಂಕರ ನಾರಾಯಣ ದೇವ ಮತ್ತು ಶ್ರೀಮತಿ ಮಮತಾ ದೇವ ಅವರ ಪ್ರಥಮ ಪುತ್ರಿ. ಸುಳ್ಯದಲ್ಲಿ ಬಾಲ್ಯದಿಂದಲೇ ಶಾಲಾ ಕಾಲೇಜು ಶಿಕ್ಷಣ ಪಡೆದು, ಕೆ. ವಿ. ಜಿ. ತಾಂತ್ರಿಕ ವಿದ್ಯಾಲಯದಿಂದ ಅತ್ಯುನ್ನತ ಶ್ರೇಣಿಯಲ್ಲಿ ಬಿ. ಇ. ಪದವಿ ಪೂರೈಸಿದ ಇವರು ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.