Breaking News

ಕನಕಮಜಲು ಪ್ರದೇಶದಲ್ಲಿ ಕಾಡುಕೋಣಗಳ ಹಾವಳಿ

Advt_Headding_Middle

 

 

ಕೃಷಿಕರು ತೋಟಕ್ಕೆ ಅಳವಡಿಸಿದ ಪೈಪು ಜೆಟ್ ಗಳ ಧ್ವಂಸ- ಅಪಾರ ನಷ್ಟ

ಕನಕಮಜಲು ಗ್ರಾಮದ ಬುಡ್ಲೆಗುತ್ತು ಪ್ರದೇಶದಲ್ಲಿ ತಡರಾತ್ರಿ ಸಮಯದಲ್ಲಿ ಕಾಡುಕೋಣಗಳ ಹಾವಳಿ ಕಂಡುಬಂದಿದೆ.
ಸುಳ್ಯ ಪುತ್ತೂರು ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಬುಡ್ಲೆಗುತ್ತು ನಿವೃತ್ತ ಶಿಕ್ಷಕ ಸೀತಾರಾಮ ಗೌಡ ರವರ ತೋಟಕ್ಕೆ ತಡರಾತ್ರಿ ನುಗ್ಗಿದ ಕಾಡು ಕೋಣಗಳ ಹಿಂಡು ತೋಟದಲ್ಲಿ ಅಡ್ಡಾ ದಿಡ್ಡಿಯಾಗಿ ಓಡಾಡಿ ನೀರು ಹಾಯಿಸಲು ಅಳವಡಿಸಿರುವ ಪೈಪುಗಳನ್ನು ಹಾಗೂ ಜೆಟ್ ಗಳನ್ನು ಪುಡಿ ಮಾಡಿ ಹಾನಿಗೊಳಿಸಿದೆ. ಸುಮಾರು 4 ಕಾಡುಕೋಣಗಳು ಹಿಂಡಾಗಿ ಬಂದು ಕೃಷಿ ತೋಟಕ್ಕೆ ದಾಳಿ ನಡೆಸಿ ನಷ್ಟ ಉಂಟು ಮಾಡಿರುತ್ತವೆ. ಇದೀಗ ಕೃಷಿಕರು ಭಯದ ವಾತಾವರಣದಲ್ಲಿ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆಯಾಗಿ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಕಾಡು ಪ್ರಾಣಿಗಳ ಉಪಟಳ ದಿಂದಾಗಿ ರೈತರು ಸಂಕಷ್ಟದ ದಿನಗಳನ್ನು ಎದುರಿಸಿ ಕಂಗೆಟ್ಟಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.