ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಸುಳ್ಯಕ್ಕೆ ಆಗಮಿಸಿದ ಡಾ.ಕೆ.ವಿ.ರೇಣುಕಾಪ್ರಸಾದ್‌ರಿಗೆ ಸ್ವಾಗತ

Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಆಯ್ಕೆಗೊಂಡ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ. ಕೆ.ವಿ. ರೇಣುಕಾಪ್ರಸಾದ್ ಅವರಿಗೆ ಸುಳ್ಯದಲ್ಲಿ ಭವ್ಯ ಸ್ವಾಗತ ದೊರೆಯಿತು.
ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದ ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಬಳಿಕ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ನೀಡಲಾಗುವ ಹೊರೆಕಾಣಿಕೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಚೆನ್ನಕೇಶವ ದೇವರ ದರ್ಶನ ಪಡೆದ ಡಾ. ಕೆ.ವಿ ರೇಣುಕಾಪ್ರಸಾದ್ ಅವರು ನಂತರ ಬೂಡು ಭಗವತಿ ದೈವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಕೆವಿಜಿ ಕ್ಯಾಂಪಸ್‌ಗೆ ತೆರಳಿದರು. ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಉದ್ಯೋಗಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ಜ್ಯೋತಿ ಆರ್.ಪ್ರಸಾದ್, ಎನ್.ಎ.ರಾಮಚಂದ್ರ, ಎಸ್.ಎನ್. ಮನ್ಮಥ, ಸಂತೋಷ್ ಕುತ್ತಮೊಟ್ಟೆ, ಸಂತೋಷ್ ಜಾಕೆ, ಡಾ.ಎನ್.ಎ. ಜ್ಞಾನೇಶ್, ಬಿ.ಟಿ. ಮಾಧವ, ಉಜ್ವಲ್ ಊರುಬೈಲು, ಭವಾನಿಶಂಕರ ಅಡ್ತಲೆ, ದಯಾನಂದ ಕುರುಂಜಿ, ಶೈಲೇಶ್ ಅಂಬೆಕಲ್ಲು, ದಿನೇಶ್ ಮಡ್ತಿಲ, ಆನಂದ ಖಂಡಿಗ, ಶಿವರಾಮ ಕೇರ್ಪಳ, ಚಿದಾನಂದ ಬಾಳಿಲ, ಅರುಣ್ ಕುರುಂಜಿ, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.