ಪಂಬೆತ್ತಾಡಿ : ಯುವಕ, ಯುವತಿ, ಮಹಿಳಾ ಮಂಡಲದ ಪದಾಧಿಕಾರಿಗಳ ಪದಗ್ರಹಣ

Advt_Headding_Middle
Advt_Headding_Middle

ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ, ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ,
ಅಮೃತಾ ಮಹಿಳಾ ಮಂಡಲ ಪಂಬೆತ್ತಾಡಿ ಈ ಸಂಸ್ಥೆಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು  ಯುವಕ ಮಂಡಲದ ಅಧ್ಯಕ್ಷ ಜನಾರ್ಧನ ಬೆಳಗಜೆ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲದ ವಠಾರದಲ್ಲಿ ನಡೆಯಿತು.

ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷರಾದ ದಯಾನಂದ ಕೇರ್ಪಳರವರು ಯುವಕ, ಯುವತಿ ಮಂಡಲದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು .

ಮುಖ್ಯ ಅತಿಥಿ ಶ್ರೀಮತಿ ಹರಿಣಿ ಸದಾಶಿವ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ಪ್ರತಿಯೊಂದು ಸಂಘ ಸಂಸ್ಥೆಗಳು ನಡೆಯಬೇಕಾದರೆ ದಾನಿಗಳ ನೆರವು ಮುಖ್ಯ ಆದರೆ ಕೇಳುವ ಮನಸ್ಸು ಪರಿಶುದ್ಧವಾಗಿದ್ದರೆ ಕೊಡುವ ಕೈಗಳು ತುಂಬು ಮನಸ್ಸಿನಿಂದ ಸಹಕಾರ ಕೊಡುತ್ತವೆ ಎಂಬ ಕಿವಿಮಾತನ್ನು ಹೇಳಿದರು.

 

ಇನ್ನೊರ್ವ ಮುಖ್ಯ ಅತಿಥಿ ಮಾರ್ಗದರ್ಶರಾದ ಜಾಕೆ ಮಾಧವ ಗೌಡ ಮಾತನಾಡಿ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕಾದರೆ ವಯಸ್ಸಿಗಿಂತ ಮನಸ್ಸು ಮುಖ್ಯ ಎಂದು ಹೇಳಿದರು.

ನೂತನ ಅಧ್ಯಕ್ಷರುಗಳು ಮಾತನಾಡಿ ಉತ್ತಮ ಕೆಲಸ ಕಾರ್ಯಗಳನ್ನು ನಡೆಸಲು ಎಲ್ಲರ ಸಹಕಾರ ಕೋರಿದರು.

ಆದ್ಯ ಬಾಬ್ಲುಬೆಟ್ಟು ಪ್ರಾರ್ಥಿಸಿದರು ಉಮೇಶ್ ಪಂಜದಬೈಲು ಸ್ವಾಗತಿಸಿದರು ,ಜಗದೀಶ ಮಠ ಮತ್ತು ಜಯಂತಿ ಪಂಜದಬೈಲು ಅತಿಥಿಗಳನ್ನು ಪರಿಚಯಿಸಿದರು .
ಬಾಲಕೃಷ್ಣ ಕೆ ಧನ್ಯವಾದಗಳನ್ನು ಸಮರ್ಪಿಸಿದರು.
ತೀರ್ಥಾನಂದ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು .

ಪಂಚಶ್ರೀ ಯುವಕ ಮಂಡಲದ ೨೦೨೨-೨೩ನೇ ಸಾಲಿನ ಗೌರವಾಧ್ಯಕ್ಷರಾಗಿ ಜನಾರ್ದನ ಬೆಳಗಜೆ, ಅಧ್ಯಕ್ಷರಾಗಿ ನಾಗಪ್ಪ ಗೌಡ ಪಿ., ಉಪಾಧ್ಯಕ್ಷರಾಗಿ ಧನಂಜಯ ಎಂ., ಕಾರ್ಯದರ್ಶಿಯಾಗಿ ನೇಮಿರಾಜ್ ಪಿ., ಜತೆಕಾರ್ಯದರ್ಶಿಯಾಗಿ ಜೀವನ್ ಎಸ್., ಖಜಾಂಜಿಯಾಗಿ ಬಾಲಕೃಷ್ಣ ಕೆ., ಕ್ರೀಡಾಕಾರ್ಯದರ್ಶಿಯಾಗಿ ವಿನಯಕುಮಾರ್ ಕೆ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ ಎ., ಆಂತರೀಕ ಲೆಕ್ಕಪರಿಶೋಧಕರಾಗಿ ಉಮೇಶ್ ಪಂಜದಬೈಲು ಮತ್ತು ಜಗದೀಶ್ ಎಸ್ ಮಠ ಆಯ್ಕೆಯಾದರು.
ಅಕ್ಷತಾ ಯುವತಿ ಮಂಡಲದ ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ವೇತಾ ಪಿ., ಉಪಾಧ್ಯಕ್ಷೆಯಾಗಿ ಚಂದ್ರಿಕಾ ಎಂ., ಕಾರ್ಯದರ್ಶಿಯಾಗಿ ನಳಿನಾಕ್ಷಿ ಮಂಚ್ಚಿಕಟ್ಟೆ, ಜತೆಕಾರ್ಯದರ್ಶಿಯಾಗಿ ಶ್ರವಣಿ ಮಂಚ್ಚಿಕಟ್ಟೆ, ಖಜಾಂಜಿಯಾಗಿ ಕುಸುಮಾ ಎಂ., ಕ್ರೀಡಾಕಾರ್ಯದರ್ಶಿಯಾಗಿ ಅಕ್ಷತಾ ಕೆ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಂತಿ ಪಿ. ಆಯ್ಕೆಯಾದರು.
ಅಮೃತಾ ಮಹಿಳಾ ಮಂಡಲದ ೨೦೨೨-೨೩ನೇ ಸಾಲಿನ ನೂತನ ಗೌರವಾಧ್ಯಕ್ಷರಾಗಿ ರತಿದೇವಿ ಜಾಕೆ, ಅಧ್ಯಕ್ಷರಾಗಿ ಶ್ರೀಮತಿ ಅನಿತಾ ಸುತ್ತುಕೋಟೆ, ಉಪಾಧ್ಯಕ್ಷೆಯಾಗಿ ಶ್ರೀಮತಿ ದಿವ್ಯಾ ಬೀಮಗುಳಿ, ಕಾರ್ಯದರ್ಶಿಯಾಗಿ ಶ್ರೀಮತಿ ಜಯಂತಿ ಪಿ., ಜತೆಕಾರ್ಯದರ್ಶಿ, ಶ್ರೀಮತಿ ಕುಸುಮಾ ಎಂ., ಖಜಾಂಜಿಯಾಗಿ ಶ್ರೀಮತಿ ಧನಲಕ್ಷ್ಮಿ ಎಂ., ಕ್ರೀಡಾಕಾರ್ಯದರ್ಶಿಯಗಿ ಶ್ರೀಮತಿ ಅಶ್ವಿನಿ ಎಂ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಹೇಮಾವತಿ ಮಂಚ್ಚಿಕಟ್ಟೆ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.