ಅವಿಸ್ಮರಣೀಯವಾಗಿಸಲು ನಾಳೆ ಊರ ಹಿರಿಯರ, ಹಳೆ ವಿದ್ಯಾರ್ಥಿಗಳ, ವಿದ್ಯಾಭಿಮಾನಿಗಳ ಮತ್ತು ಮಕ್ಕಳ ಪೋಷಕರ ಸಭೆ
ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಶತವರ್ಷದ ಸಂಭ್ರಮವನ್ನು ಅವಿಸ್ಮರಣೀಯ ವಾಗಿ ಆಚರಿಸುವ ಉದ್ದೇಶದಿಂದ ಊರಿನ ಹಿರಿಯರ, ಹಳೆ ವಿದ್ಯಾರ್ಥಿ ಗಳ, ಊರ ಪ್ರಮುಖರ, ವಿದ್ಯಾಮಾನಿಗಳ ಮತ್ತು ಮಕ್ಕಳ ಪೋಷಕರ ಸಭೆಯನ್ನು ನಾಳೆ (ಜ.9) ಪೂ.10 ಗಂಟೆಗೆ ದೇವಚಳ್ಳ ಶಾಲೆಯಲ್ಲಿ ಕರೆಯಲಾಗಿದ್ದು, ಈ ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವಂತೆ ಶಾಲಾ ವತಿಯಿಂದ ವಿನಂತಿಸಲಾಗಿದೆ.