Breaking News

ದೇವ : ಕ್ರೀಡೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ

Advt_Headding_Middle

 

ಗೆಳೆಯರ ಬಳಗ ದೇವ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಳ ದೇವ, ಇವುಗಳ ಜಂಟಿ ಆಶ್ರಯದಲ್ಲಿ  ಕ್ರೀಡೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಜನವರಿ 2 ರಂದು ದೇವ ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು•

ಕಾರ್ಯಕ್ರಮವನ್ನು  ಭೂಸೇನಾ ಯೋಧ ವಿನಯ ಕುಮಾರ್ ಹಿರಿಯಡ್ಕ ಉದ್ಘಾಟಿಸಿದರು. ಪುರುಷರಿಗೆ, ಮಹಿಳೆಯರಿಗೆ,ಸಾರ್ವಜನಿಕ ಮಕ್ಕಳಿಗೆ, ಶಾಲಾಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ, ಅನೇಕ ಆಟೋಟ ಸ್ಪರ್ಧಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ ವಹಿಸಿದ್ದರು. ವೇದಿಕೆಯಲ್ಲಿ ದೇವಚಳ್ಳಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಲೋಚನಾ ದೇವ, ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು,ರಮೇಶ ಪಡ್ಪು,ಸುಳ್ಯ ಎ ಪಿ ಎಂ ಸಿ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು,ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ದೇವ ಒಕ್ಕೂಟದ ಅಧ್ಯಕ್ಷರಾದ ನಳಿನಾಕ್ಷ ಹಿರಿಯಡ್ಕ,ಸುಳ್ಯ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ತೇಜಾವತಿ ಗಿರೀಶ್ ಪಡ್ದಮ್ಬೈಲ್, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಿ ಪ್ರತಿಭಾ ಕಾಯರ,ಜ್ಯೋತಿಲಕ್ಷ್ಮಿ ಮಹಿಳಾ ಮಂಡಳದ ಅಧ್ಯಕ್ಷರಾದ ಕವಿತಾ ಜನಾರ್ದನ ಕುತ್ಯಾಳ, ಗೆಳೆಯರ ಬಳಗದ ಕಾರ್ಯದರ್ಶಿ ಉಮೇಶ್ ದೇವ, ಮಹಿಳಾ ಮಂಡಳದ ಕಾರ್ಯದರ್ಶಿ ರೇಣುಕಾ ವಿಶ್ವನಾಥ ಚಿರೆಕಲ್ಲು, ಅಂಗನವಾಡಿ ಕಾರ್ಯಕರ್ತೆ ಲತಾ,ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ಗೆಳೆಯರ ಬಳಗದ ಅಧ್ಯಕ್ಷರು ಹಾಲಿ ಎ ಪಿ ಎಂ ಸಿ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡುರವರನ್ನು ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು. ತೀರ್ಥೇಶ್ ಪಾರೆಪ್ಪಾಡಿ ಸ್ವಾಗತಿಸಿ, ಮುಕುಂದ ಹಿರಿಯಡ್ಕ ಧನ್ಯವಾದ ಅರ್ಪಿಸಿದರು, ಕಾರ್ತಿಕ್ ದೇವ ಕಾರ್ಯಕ್ರಮ ನಿರೂಪಿಸಿದರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮದ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.