Breaking News

ನಾರ್ಕೋಡು ಕೋಲ್ಚಾರು ‌ಕನ್ನಡಿತೋಡು ರಸ್ತೆ ಕಾಮಗಾರಿ ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ

Advt_Headding_Middle

 

ರಸ್ತೆ ಅಗಲೀಕರಣಕ್ಕೆ ಮರ ತೆರವುಗೊಳಿಸಲು ಆದೇಶ, ಶೀಘ್ರ ಕಾಮಗಾರಿ ಸಂಪೂರ್ಣಗೊಳಿಸುವಂತೆ ಖಡಕ್ ಸೂಚನೆ

ನಾರ್ಕೋಡು ಕೋಲ್ಚಾರು ಕನ್ನಡಿತೋಡು ರಸ್ತೆಯ ಮೂಲಕ ಕೇರಳದ ಬಂದಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಸುಮಾರು 10.5 ಕೋಟಿ ಅನುದಾನದಲ್ಲಿ‌ ಕಾಮಗಾರಿ ಕೆಲಸ ಪ್ರಾರಂಭಗೊಂಡು ನಿಧಾನಗತಿಯಲ್ಲಿ ನಡೆಯುತ್ತಿರುವುದನ್ನು ಸಾರ್ವಜನಿಕರು ‌ ಆಕ್ಷೇಪಿಸಿ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಗುತ್ತಿಗೆದಾರರನ್ನು ತರಾಟೆಗೆತ್ತಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂಟ್ರಾಕ್ಟರ್ ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯ ಕೆಲವು ಮರಗಳನ್ನು ತೆರವು ಮಾಡಬೇಕಾಗುತ್ತದೆ. ಇದಕ್ಕೆ ಅರಣ್ಯ ಇಲಾಖೆಯ ಅನುಮತಿ ದೊರಕದಿರುವುದರಿಂದ ಕೆಲಸ ಮಾಡಲು ಅಡ್ಡಿಯಾಗಿದೆ ಎಂಬ ಉತ್ತರ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಯ ಕುರಿತು ಸ್ಥಳೀಯ ಜನಪ್ರತಿನಿಧಿಗಳು‌ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಎಸ್.ಅಂಗಾರ ರವರು ಈ ಬಗ್ಗೆ ಮಾತುಕತೆ‌ ನಡೆಸಿ ಸಮಸ್ಯೆ ಪರಿಹರಿಸುವ ಸಲುವಾಗಿ ಇಂದು ಅರಣ್ಯ ಇಲಾಖೆಯ ಅಧಿಕಾರಿ ಡಿ.ಎಫ್.ಒ ದಿನೇಶ್ ಕುಮಾರ್ ವೈ.ಕೆ. ಯವರನ್ನು ಸ್ಥಳಕ್ಕೆ ಬರಮಾಡಿಸಿ ಪರಿಶೀಲನೆ‌ ನಡೆಸಿ ರಸ್ತೆ ಅಗಲೀಕರಣ ಸಂದರ್ಭ ಅಗತ್ಯತೆ ಬೀಳುವ ಮರಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅರಣ್ಯಾಧಿಕಾರಿ ಯವರು ಇಂದು ‌ನಾರ್ಕೋಡು ಕೋಲ್ಚಾರು ‌ಕನ್ನಡಿತೋಡು ತನಕ ಸಂಚರಿಸಿ ಪರಿಶೀಲಿಸಿ ರಸ್ತೆಯ ಬದಿ ಇರುವ ಸುಮಾರು 52 ಮರಗಳನ್ನು ತೆರವುಗೊಳಿಸುವ ಬಗ್ಗೆ ಕಾರ್ಯಾಚರಣೆ ಶೀಘ್ರವಾಗಿ ಕೈಗೊಳ್ಳಲಾಗುವುದು‌ ಇದಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ರವರ ಜತೆ ಸಮಾಲೋಚನೆ ನಡೆಸುವುದಾಗಿ ಸಚಿವರ ಸಮ್ಮುಖದಲ್ಲಿ ಇಲಾಖೆಯ ಅಧಿಕಾರಿಯವರು ತಿಳಿಸಿದರು. ಎ.ಸಿ.ಎಫ್.ಪ್ರವೀಣ್ ಕುಮಾರ್ ಶೆಟ್ಟಿ ಜತೆಯಲ್ಲಿದ್ದರು.
ಸ್ಥಳದಲ್ಲಿ ರಸ್ತೆ ಕಾಮಗಾರಿ ಕೆಲಸ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರ ಪೈಕಿಯವರನ್ನು ಸ್ಥಳಕ್ಕೆ ‌ಕರೆಸಿ ತ್ವರಿತ ಗತಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಸಚಿವರು ಖಡಕ್ ಸೂಚನೆ ನೀಡಿದರು. ರಸ್ತೆಯ ಕೆಲವು ಭಾಗಗಳಲ್ಲಿ ಕಾಂಕ್ರೀಟ್ ಚರಂಡಿಯನ್ನು ನಿರ್ಮಿಸಲು ಆದೇಶಿಸಿದರು.
ಈ ಸಂದರ್ಭ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,‌ ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ‌ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಸದಸ್ಯೆ ಶಂಕರಿ ಕೊಲ್ಲರಮೂಲೆ, ‌ಪಂ.ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಸುನಿಲ್ ಕೇರ್ಪಳ, ‌ಆಲೆಟ್ಟಿ‌ ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು, ಸ್ಥಳೀಯ ಮುಖಂಡರಾದ ಸೀತಾರಾಮ ಕೊಲ್ಲರಮೂಲೆ, ನ್ಯಾಯವಾದಿ ಸತೀಶ್ ಕುಂಭಕೋಡು, ಪ್ರದೀಪ್ ಕೊಲ್ಲರಮೂಲೆ, ಪ್ರಣೀತ್ ಕಣಕ್ಕೂರು, ‌ಚಿದಾನಂದ ಕೋಲ್ಚಾರು, ಪ್ರದೀಪ್ ‌ಕೊನ್ನೋಡಿ,ತೀರ್ಥ ಪ್ರಸಾದ್ ಕೋಲ್ಚಾರು, ಕು.ಅನುಷಾ ಕೊಲ್ಲರಮೂಲೆ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.