Breaking News

ಪಾಣತ್ತೂರಿನಲ್ಲಿ ಲಾರಿ ಪಲ್ಟಿಯಾಗಿ ಮೃತಪಟ್ಟವರ ಮನೆಗೆ ಸಚಿವ ಎಸ್.ಅಂಗಾರ ಭೇಟಿ

Advt_Headding_Middle

 



ಕಲ್ಲಪಳ್ಳಿ ಪಾಣತ್ತೂರಿನ‌ ಪರಿಯಾರ ಎಂಬಲ್ಲಿ ‌ಇತ್ತೀಚೆಗೆ ಮರ ಹೇರಿಕೊಂಡು ಹೋಗುತ್ತಿದ್ದ ಲಾರಿ ಮಗುಚಿದ ಅವಘಡದಲ್ಲಿ ಪನತ್ತಡಿ ಪಂಚಾಯತ್ ವ್ಯಾಪ್ತಿಯ ಬಿ.ಎಂ.ಎಸ್.ಸಂಘ‌ ಪರಿವಾರದ ಸಕ್ರಿಯ 4 ಮಂದಿ ಕಾರ್ಯಕರ್ತರಾದ ನಾರಾಯಣನ್ ಕೆ, ಬಾಬು ಎನ್ , ವೆಂಕಪ್ಪ ಐ, ಮೋಹನನ್ ಕೆ.ಯಂ ರವರು ದುರ್ಮರಣಕ್ಕೀಡಾಗಿದ್ದು ಅವರ ಮನೆಗೆ ಜ.8 ರಂದು ಸುಳ್ಯ ಶಾಸಕರು, ‌ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಮಾತನಾಡಿದ ಸಚಿವರು ಸಂಘಟನೆಯಲ್ಲಿ‌ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು‌ ಕಳೆದುಕೊಂಡಾಗ ಅವರ ಮನೆಯವರ ಪರಿಸ್ಥಿತಿ ‌ಬಗ್ಗೆ ತಿಳಿದುಕೊಂಡು ‌ಅವರಿಗೆ ನಮ್ಮಿಂದಾಗುವ‌ ಸಹಾಯ ಮಾಡುವ ಕರ್ತವ್ಯ ನಮ್ಮದು. ಸರಕಾರದ ನೆಲೆಯಲ್ಲಿ ಪರಿಹಾರ ನೀಡಲು ತೊಡಕುಗಳಿರುವುದರಿಂದ ನನ್ನ ವೈಯುಕ್ತಿಕ ನೆಲೆಯಲ್ಲಿ ಮತ್ತು ಸಂಘ ಪರಿವಾರದ ಮುಖಾಂತರ ಸಹಾಯ ಹಸ್ತ ನೀಡುವುದಾಗಿ ತಿಳಿಸಿದರು. ಅಪಘಾತ ನಡೆದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ‌ ಕುಂಟಾರು, ಜಿಲ್ಲಾ ಕಾರ್ಯದರ್ಶಿ ಎನ್.ಮಧು, ಪಂ.ಸದಸ್ಯ ವೇಣುಗೋಪಾಲ್ ಕೆ.ಕೆ, ರಾಮಚಂದ್ರ ಸರಳಾಯ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,‌ ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಸ್ಥಳೀಯ ಮುಖಂಡರಾದ ಕೆ.ಶ್ರೀಜಿತ್, ಕೆ.ಗೋವಿಂದನ್ ಮಡಿಕೈ, ರಾಜೀವನ್,‌ ಶಿಬು,‌ ನಂದಕುಮಾರ್ ಬಾಟೋಳಿ,‌ ಜಯಪ್ರಕಾಶ್ ಪೆರುಮುಂಡ, ಸುಧಾಕರ ಬೆಳ್ಳೂರು,‌ ಶ್ರೀಕಾಂತ್ ಗೋಳ್ವಾಲ್ಕರ್, ಮಹೇಶ್ ಬಲ್ಕಾಡಿ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುಧಾಕರ ಆಲೆಟ್ಟಿ, ಮಹೇಶ್ ಕುತ್ಯಾಳ, ಸುನಿಲ್ ಕೇರ್ಪಳ ಹಾಗೂ ಸ್ಥಳೀಯ ಬಿಜೆಪಿ ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.