Breaking News

ಯಾದವ ಸಭಾ ತಾಲೂಕು ಸಮಿತಿಯ ಪದಗ್ರಹಣ ಕಾರ್ಯಕ್ರಮ

Advt_Headding_Middle

 

ಯಾದವ ಸಭಾ ತಾಲೂಕು ಸಮಿತಿ ಸುಳ್ಯ 2022-25 ನೇ ಸಾಲಿನ ನೂತನ ತಾಲೂಕು ಸಮಿತಿ, ಯುವ ವೇದಿಕೆ, ಮಹಿಳಾ ವೇದಿಕೆ, ಕಾರ್ಯಕಾರಿ ಸದಸ್ಯರ ಪದಗ್ರಹಣ ಕಾರ್ಯಕ್ರಮವು ಇಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಯಾದವ ಸಭಾ ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಮಧುಸೂದನ್ ಆಯರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಕಟಪೂರ್ವಾಧ್ಯಕ್ಷ ಜನಾರ್ಧನ ಕಣಕ್ಕೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಧಾಮ ಆಲೆಟ್ಟಿ, ಉಪಾಧ್ಯಕ್ಷ ವಿ.ವಿ.ಬಾಲನ್, ಯಾದವ ಸಭಾ ತಾಲೂಕು ಸಮಿತಿಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಶಾರದಾರಾಮನ್, ತಾಲೂಕು ಸಮಿತಿಯ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೋಶಾಧಿಕಾರಿ ದಾಮೋದರ ಕೇನಾಜೆ, ತಾಲೂಕು ಸಮಿತಿ ಮಹಿಳಾ ಅಧ್ಯಕ್ಷೆ ರಾಜೀವಿ ಪರ್ಲಿಕಜೆ, ತಾಲೂಕು ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಅಡ್ಡಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಂದಿನ ಅವಧಿಯಲ್ಲಿ ತಾಲೂಕು ಸಮಿತಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಸುಧಾಮ ಆಲೆಟ್ಟಿಯವರು ವಿಸ್ತಾರವಾಗಿ ವಿವರ ನೀಡಿದರು. ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಮಿತಿ ಅಧ್ಯಕ್ಷ ಯಾದವ ಸಭಾ ಕೇಂದ್ರ ಸಮಿತಿ, ತಾಲೂಕು ಸಮಿತಿ ಮತ್ತು ಪ್ರಾದೇಶಿಕ ಸಮಿತಿಗಳು ಮುಂದೆ ನಾವು ಆರ್ಥಿಕವಾಗಿ ಬೆಳೆಯಬೇಕಾದರೆ ಮತ್ತು ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಇದರ ಬಗ್ಗೆ ಮುಂದುವರಿಯಬೇಕಾದರೆ ಈಗಾಗಲೇ ನಮ್ಮ ಯಾದವ ಸಮಾಜವನ್ನು ಎಸ್‌ಟಿ ಕೆಟಗರಿಗೆ ಸೇರಿಸುವಲ್ಲಿ ಚಿತ್ರದುರ್ಗ ಶಾಸಕಿ ಪೂರ್ಣಿಮಾ ಶ್ರೀನಿವಾಸರವರು ವಿಧಾನಸೌಧದಲ್ಲಿ ಹೋರಾಟ ಪ್ರಾರಂಭಿಸಿದ್ದಾರೆ. ಇವರಿಗೆ ನಾವು ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ಸಮುದಾಯದ ಒಳಿತಿಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು. ದಾಮೋದರ ಕೇನಾಜೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೃಷ್ಣ ಬೆಟ್ಟ ವಂದಿಸಿದರು. ಮೇಘ ಕೃಷ್ಣ ಪ್ರಾರ್ಥಿಸಿದರು. ಎಲ್ಲಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.