Breaking News

ಗುತ್ತಿಗಾರು ಕ್ರಿಕೆಟ್ ಪಂದ್ಯಾಟ: ಎಸ್ ಕೆ ಗುತ್ತಿಗಾರು ಪ್ರಥಮ, ಬ್ರದರ್ಸ್ ಕಂಚಿಲ್ಪಾಡಿ ದ್ವಿತೀಯ

Advt_Headding_Middle

 

 

ದಿವಗಂತ ಡಿ.ಜೆ ರಾಧಾಕೃಷ್ಣ ದೇವಶ್ಯ ಇವರ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಗುತ್ತಿಗಾರಿನಲ್ಲಿ ಜ. 7 ರಂದು ನಡೆಯಿತು.
ಪಂದ್ಯಾಟದಲ್ಲಿ ಎಸ್ ಕೆ ಗುತ್ತಿಗಾರು ಪ್ರಥಮ, ಬ್ರದರ್ಸ್ ಕಂಚಿಲ್ಪಾಡಿ ದ್ವಿತೀಯ, ಎಸ್ ಎಂ ಜೆ ಗುತ್ತಿಗಾರು ತೃತೀಯ, ಕೆ ಎಫ್ ಸಿ ಕೊಯಿಲ ಚತುರ್ಥ ಬಹುಮಾನ ಪಡೆದುಕೊಂಡಿತು.
ಕ್ರಿಕೆಟ್ ಪಂದ್ಯಾಟವನ್ನು ದಿ. ಡಿ.ಜೆ ರಾಧಾಕೃಷ್ಣ ದೇವಶ್ಯ ಇವರ ಪತ್ನಿ ಶ್ರೀಮತಿ ಜಯಂತಿ ದೇವಶ್ಯ ಉಧ್ಘಾಟಿಸಿದರು. ಸಮಾರಂಭದ ವೇದಿಕೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಚ್ಚುತ್ತ ಗುತ್ತಿಗಾರು, ದೇವಶ್ಯ ಕುಟುಂಬಸ್ಥರಾದ ಯೋಗಿತ್ ದೇವಶ್ಯ, ನಿಶ್ಚಿತ್ ದೇವಶ್ಯ ಉಪಸ್ಥಿತರಿದ್ದರು. ಸಂಜೆ
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಗುತ್ತಿಗಾರು ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಪರಶುರಾಮ ಚಿಲ್ತಡ್ಕ, ಗುತ್ತಿಗಾರು ಗ್ರಾ. ಪಂ.ಸದಸ್ಯರಾದ ಮಾಯಿಲಪ್ಪ ಕೊಂಬೆಟ್ಟು, ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಅಚ್ಚುತ್ತ ಗುತ್ತಿಗಾರು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಮಾಧವ ಎರ್ಧಡ್ಕ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಚಾರ್ಮತ , ಎಂಡ್ರೋ ಆನ್‌ಲೈನ್‌ ಶಾಪ್ ಪ್ರೈ. ಲಿ. ಣ ಶ್ರೀಮತಿ ಪ್ರಜ್ನಾ ವಿಜಯ್, ಪ್ರಗತಿಪರ ಕ್ರಷಿಕರಾದ ಕ್ರಷ್ಣಪ್ಪ ಗೌಡ ಅಂಬೆಕಲ್ಲು, ಯುವ ಉದ್ಯಮಿಗಳಾದ ವಿನ್ಯಾಸ್ ಕೊಚ್ಚಿ, ಕ್ರೀಡಾ ಪ್ರೋತ್ಸಾಹಕರಾದ ಸಿರಿಯಾಕ್ ಮಾಥ್ಯೂ ಆಚಳ್ಳಿ, ವಿಜೇಶ್ ಹಿರಿಯಡ್ಕ, ರವೀಶ್ ಪೈಕ, ಸುರೇಶ್ ಚತ್ರಪಾಡಿ, ಗುರುವ ಆಚಳ್ಳಿ, ಶಿವ ಮೋಟ್ನೂರು, ಮರಿಯಪ್ಪ ಮಾವಜಿ, ಗಿರಿಪ್ರಸಾದ್ ಪಾರೆಪ್ಪಾಡಿ, ಶಿವ ಪ್ರಸಾದ್ ಚನಿಲ,ಲಿಂಗಪ್ಪ ಚತ್ರಪಾಡಿ, ಚಂದ್ರಶೇಖರ್ ಪಾರೆಪ್ಪಾಡಿ ಹಾಗು ದೇವಶ್ಯ ಕುಟುಂಬಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂದ್ಯಾಟದ ತೀರ್ಪುಗಾರರಾಗಿ ಮಣಿಕಂಠ ಸುಬ್ರಮಣ್ಯ, ಆಸಿಫ್ ಜಯನಗರ, ಅಚ್ಚುತ್ತ ಗುತ್ತಿಗಾರು, ರವೀಶ್ ಪೈಕ , ಶ್ರೀಕಾಂತ್ ಗುತ್ತಿಗಾರು. ಹಾಗೂ ಪಂದ್ಯಾಟದ ವೀಕ್ಷಕ ವಿವರಣೆಗಾರರಾಗಿ ನಿರಂತ್ ದೇವಶ್ಯ , ಗುರುಪ್ರಸಾದ್ ನಿಡುಬೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.