Breaking News

ಜ.13,14 : ರಂಗಮನೆಯಲ್ಲಿ ಶಾಸ್ತ್ರೀಯ ಸಂಗೀತೋತ್ಸವ

Advt_Headding_Middle

 

 

 

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.)ಸುಳ್ಯ ಇದರ ಆಶ್ರಯದಲ್ಲಿ
ಜನವರಿ 14 ರಿಂದ 3 ದಿನ ನಡೆಯಬೇಕಾಗಿದ್ದ ಶಾಸ್ತ್ರೀಯ ಸಂಗೀತೋತ್ಸವವನ್ನು ಕೋವಿಡ್ ವೀಕೆಂಡ್ ಕರ್ಪ್ಯೂ ಕಾರಣಕ್ಕಾಗಿ ಜನವರಿ 13 ಮತ್ತು 14 ರಂದು ಸಂಜೆ 6.00 ರಿಂದ 8.00 ರ ವರೆಗೆ  ನಡೆಸುವುದೆಂದು ತೀರ್ಮಾನಿಸಲಾಗಿದೆ.
ಜ.13 ರಂದು ಗುರುವಾರ ವಿದ್ವಾನ್ ದಿಂಡೋಡಿ ನಿರಂಜನ್ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮೈಸೂರು ಸುಮಂತ್ ಮಂಜುನಾಥ್ ಇವರಿಂದ ವಯಲಿನ್ ಜುಗಲ್ ಬಂದಿ ನಡೆಯಲಿದೆ.ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಪುತ್ತೂರು ಹಾಗೂ ಘಟಂನಲ್ಲಿ ವಿದ್ವಾನ್ ಶಾಂತಾರಾಜು ಬೆಂಗಳೂರು ಸಹಕರಿಸಲಿದ್ದಾರೆ.
ಜ.14 ರಂದು ಶುಕ್ರವಾರ ಕುಂದಾಪುರದ  ವಿದ್ವಾನ್ ರಾಘವೇಂದ್ರ ಉಪಾಧ್ಯಾಯ ಬವಳಾಡಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿದೆ.
ತಬಲದಲ್ಲಿ ವಿದ್ವಾನ್ ಶ್ರೀದತ್ತ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ವಿದ್ವಾನ್ ಹೇಮಂತ್ ಕುಮಾರ್ ಮಂಗಳೂರು ಸಹಕರಿಸಲಿದ್ದಾರೆ.
ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಭಾಗವಹಿಸುವ ಎಲ್ಲರಿಗೂ  ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ರಂಗಮನೆ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.