ಮತ ಹಾಕಿದ್ದಕ್ಕೆ ಬೆಲೆ ಬಂದಿದೆ, ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವೆ

Advt_Headding_Middle
Advt_Headding_Middle

‘ಸುದ್ದಿ’ ಸಂದರ್ಶನದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ. ರೇಣುಕಾಪ್ರಸಾದ್

ದಕ್ಷಿಣ ಕನ್ನಡ ಮತಕ್ಷೇತ್ರದ ಮತದಾರರು ನೀಡಿದ ಮತಕ್ಕೆ ಬೆಲೆ ಬಂದಂತಾಗಿದೆ. ಎಲ್ಲರ ಬೆಂಬಲ, ದೇವರುಗಳ ಅನುಗ್ರಹ ಮತ್ತು ಹಿತೈಷಿಗಳ ಸಹಕಾರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಇದೀಗ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಸ್ಥಾನದಂತಹಾ ದೊಡ್ಡ ಜವಾಬ್ದಾರಿಯನ್ನು ಪಡೆಯುವಂತಾಗಿದೆ. ಎಲ್ಲರ ಸಹಕಾರದಿಂದ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸ ಇದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ. ರೇಣುಕಾಪ್ರಸಾದ್ ಹೇಳಿದ್ದಾರೆ.

ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಸುಳ್ಯಕ್ಕೆ ಆಗಮಿಸಿದ ಅವರು ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಯೊಂದಿಗೆ ಮಾತನಾಡಿದರು.
ತಂದೆಯವರಾದ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪ್ರಯತ್ನದಿಂದ ದ.ಕ. ಮತಕ್ಷೇತ್ರ ರೂಪುಗೊಂಡಿತು. ಅವರು ಸತ್ಯ, ನ್ಯಾಯದ ಮಾರ್ಗದಲ್ಲಿ ನಡೆದವರು. ಇದುವೇ ನನ್ನ ಗೆಲುವಿಗೂ ಕಾರಣವಾಯಿತು. ಈಗ ಈ ಕ್ಷೇತ್ರದ ನಿರ್ದೇಶಕನಾಗಿ ಆಯ್ಕೆಯಾಗಿ ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಕನ್ನಡ ಕ್ಷೇತ್ರದ ಜನತೆಗೆ ಸಂದ ಗೌರವ. ಸಂಘದ ಉನ್ನತ ಹುದ್ದೆ ಪ್ರಥಮ ಬಾರಿಗೆ ಈ ಜಿಲ್ಲೆಗೆ ದೊರೆತಿದೆ. ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ ಜಿಲ್ಲೆಗಳ ಪ್ರಭಾವಿಗಳ ಪಾಲಾಗುತ್ತಿದ್ದ ಈ ಹುದ್ದೆ ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರಕ್ಕೆ ದೊರೆತಿರುವುದು ಮಲೆನಾಡ ಜಿಲ್ಲೆಯ ಇಡೀ ಜನತೆಗೆ ಸಿಕ್ಕಿದ ಗೌರವ ಮತ್ತು ಈ ಭಾಗಕ್ಕೆ ಪ್ರಥಮವಾಗಿ ದೊರೆತ ಗೌರವ. ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನೀಡಿದ ಅಭೂತಪೂರ್ವ ಬೆಂಬಲದಿಂದ ಗೆಲುವು ಸಾಧಿಸಿ ನಾಲ್ಕನೇ ಬಾರಿ ನಿರ್ದೇಶಕನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಜಿಲ್ಲೆ ಗುರುತಿಸುವ ಹಾಗೆ ಕೆಲಸ ಮಾಡುತ್ತೇನೆ. ಮತದಾರರಿಗೆ ಮತ್ತು ಜನತೆಗೆ, ನೂತನ ಅಧ್ಯಕ್ಷರಿಗೆ ಮತ್ತು ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಒಕ್ಕಲಿಗರ ಸಂಘದ ಸಂವಿಧಾನ ಮತ್ತು ಬೈಲಾ ಪ್ರಕಾರ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತೇನೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ನೀಡುವುದು, ಹಾಸ್ಟೆಲ್ ನಿರ್ಮಾಣ ಸೇರಿದಂತೆ ಸಮುದಾಯಕ್ಕೆ ಸಂಘದ ಕಡೆಯಿಂದ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಸದಸ್ಯತ್ವ ಸೇರ್ಪಡೆ ಮಾಡುವ ಸಂದರ್ಭದಲ್ಲಿ ಕ್ಷೇತ್ರದ ಹೆಚ್ಚಿನ ಜನರಿಗೆ ಸದಸ್ಯತ್ವ ನೀಡುವ ಪ್ರಯತ್ನ ನಡೆಸುತ್ತೇನೆ. ಒಕ್ಕಲಿಗರ ಸಂಘದ ಸದಸ್ಯತ್ವ ಪಡೆಯುವುದೆಂದರೆ ಗೌಡರಿಗೆ ಅದೊಂದು ಹೆಮ್ಮೆಯ ಸಂಗತಿ. ಇತರ ಜಿಲ್ಲೆಗಳಿಗೆ ಸರಿ ಸಮಾನವಾಗಿ ಇಲ್ಲೂ ಸದಸ್ಯತ್ವ ಅಭಿವೃದ್ಧಿ ಪಡಿಸಲಾಗುವುದು ಎಂದು ಡಾ.ರೇಣುಕಾಪ್ರಸಾದ್‌ಹೇಳಿದರು.
ನನ್ನ ಗೆಲುವಿಗಾಗಿ ಯಾರೆಲ್ಲಾ ಶ್ರಮಿಸಿದ್ದಾರೋ ಅವರು ಇನ್ನು ಮುಂದೆಯೂ ನನ್ನ ಜೊತೆಗಿರಬೇಕು. ನಾನೂ ಅವರೊಂದಿಗಿರುತ್ತೇನೆ, ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯೋಣ. ಯಾರಿಗೇ ಆಗಲಿ ಸಮಸ್ಯೆಯಾದರೆ ಅವರ ರಕ್ಷಣೆ ನಮ್ಮ ಹೊಣೆ ಎಂದ ಅವರು ಈ ಹಿಂದೆ ತಂದೆಯವರು ನಿರ್ದೇಶಕರಾಗಿದ್ದಾಗ ಅವರಿಗೆ ಪದಾಧಿಕಾರಿ ಸ್ಥಾನದ ಸಾಧ್ಯತೆ ಇದ್ದರೂ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ತ್ಯಾಗ ಮಾಡಿದ್ದರು. ನನಗೂ ಈ ಹಿಂದೆ ಇಂತಹ ಜವಾಬ್ದಾರಿಯ ಸಂದರ್ಭಗಳು ಬಂದಾಗ ನಿರಾಕರಿಸಿದ್ದೆ. ಆದರೆ ಈಗ ಜಿಲ್ಲೆಯ ಎಲ್ಲರೂ ಅಧಿಕಾರ ಸ್ಥಾನದಲ್ಲಿ ನೀವಿರಬೇಕು. ನಿಮಗೆ ಗೌರವದ ಸ್ಥಾನಮಾನ ಬೇಕು ಎಂದು ಅಪೇಕ್ಷೆ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ಉಪಾಧ್ಯಕ್ಷನಾಗಿದ್ದೇನೆ ಎಂದು ಅವರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.