Breaking News

ಬಳ್ಪ ನೀರಜರಿ ಕೊರಗಜ್ಜ ವಿಗ್ರಹ ಪ್ರತಿಷ್ಠೆ ನೇಮೋತ್ಸವ

Advt_Headding_Middle

 

ಬಳ್ಪ ಗ್ರಾಮದ ನೀರಜರಿ ಶ್ರೀ ನಾಗಬ್ರಹ್ಮ ಆದಿ ಮೊಗೆರ್ಕಳ ದೈವಸ್ಥಾನದಲ್ಲಿ 8ನೇ ವರ್ಷದ ದೈವಗಳ ನೇಮೋತ್ಸವ ಜ. 8 ಮತ್ತು 9ರಂದು ನಡೆಯಲಿದೆ.
ಜ. 6ರಂದು ಮಧ್ಯಾಹ್ನ ಪಂಜ ಸಿ.ಎ ಬ್ಯಾಂಕ್ ವಠಾರದಿಂದ ವಾಹನ ಮೆರವಣಿಗೆಯ ಮೂಲಕ ಬಳ್ಪಕ್ಕೆ ಆಗಮಿಸಿ ಅಲ್ಲಿಂದ ಪೂರ್ಣಕುಂಭ ಕಲಶದೊಂದಿಗೆ ಪಾದಯಾತ್ರೆ ಮೂಲಕ ನೀರಜರಿ ದೈವಸ್ಥಾನದವರೆಗೆ ಸ್ವಾಮಿ ಕೊರಗಜ್ಜ ದೈವದ ಮೂರ್ತಿಯ ಮೆರವಣಿಗೆ ನಡೆಯಿತು.

ಜ. 7ರಂದು ಸ್ವಾಮಿ ಕೊರಗಜ್ಜನ ಪ್ರತಿಷ್ಠೆ, ವಿವಿಧ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಜ. 8ರಂದು ಬೆಳಿಗ್ಗೆ ಗಣಹೋಮ, ಸಂಜೆ ಗುಳಿಗ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಿತು.

ರಾತ್ರಿ ಅನ್ನಸಂತರ್ಪಣೆ ಬಳಿಕ ಮೊಗೇರ್ಕಳ ಗರಡಿ ಇಳಿದು ಬಳಿಕ ತನ್ನಿ ಮಾಣಿಗ ಗರಡಿ ಇಳಿಯುವುದು ನಡೆಯಿತು. ಜ. 9ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಗಂಧ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ಸಚಿವ ಎಸ್. ಅಂಗಾರ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರ ಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.