ಪಂಜ : ಓಂತ್ರಡ್ಕ ಶಾಲಾ ಶಿಕ್ಷಕ ಕುಸುಮಾಧರ ಕೆ. ನಿವೃತ್ತಿ

Advt_Headding_Middle
Advt_Headding_Middle

 

ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂತ್ರಡ್ಕ ಶಾಲಾ ಶಿಕ್ಷಕ ಕುಸುಮಾಧರ ಕೆ. ಇವರು ಡಿ.31 ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ. ಐವತ್ತೊಕ್ಲು ಗ್ರಾಮದ ದಿ. ಕೆ. ಕೃಷ್ಣಪ್ಪ ಗೌಡ ಮತ್ತು ದಿ. ಕೆ ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರರಾಗಿರುವ ಇವರು ವಿದ್ಯಾಭ್ಯಾಸವನ್ನು ಸ.ಮಾ.ಹಿ.ಪ್ರಾ.ಶಾಲೆ ಪಂಜ, ಪ್ರೌಢಶಿಕ್ಷಣವನ್ನು ಸ..ಪ.ಪೂ. ಕಾಲೇಜ್ ಪಂಜದಲ್ಲಿ ಮುಗಿಸಿ, ಬಿ.ಎ. ಪದವಿಯನ್ನು ಕೆ.ಎಸ್.ಓ.ಯು. ಮೈಸೂರಿನಿಂದ ಪಡೆದು, ಟಿಸಿಹೆಚ್ ತರಬೇತಿಯನ್ನು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಮಂಗಳೂರಿನಲ್ಲಿ ಪೂರೈಸಿರುತ್ತಾರೆ.

1991 ರಲ್ಲಿ ವೃತ್ತಿಯನ್ನು ಸುಳ್ಯ ತಾಲೂಕಿನ ಸ.ಕಿ.ಪ್ರಾ.ಶಾಲೆ ಗೋವಿಂದನಗರದಲ್ಲಿ ಪ್ರಾರಂಭಿಸಿ, ಬಳಿಕ ಬಾಳುಗೋಡು, ಕುಂತೂರು, ಪಂಬೆತ್ತಾಡಿ, ಕೊಣಾಜೆ ಮತ್ತು ಪಿಜಕ್ಕಳ ಹಾಗೂ ಓಂತ್ರಡ್ಕ ದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ತಮ್ಮ ಸೇವಾ ಅವಧಿಯಲ್ಲಿ ಶಾಲೆಯ ಸರ್ವತೋಮುಖ ಅಭಿವದ್ಧಿಗೆ ಕಾರಣೀಭೂತರಾಗಿದ್ದು, ಅಲ್ಲದೆ ಸೇವಾದಳ ವಿಭಾಗದಲ್ಲಿ ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.
ಅಲ್ಲದೆ ಧಾರ್ಮಿಕ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಶಾರದಾಂಬಾ ಭಜನಾ ಮಂಡಳಿಯ ಅರ್ಧ ಏಕಾಹ ಭಜನೋತ್ಸವ ಸಮಿತಿಯ ಪ್ರಥಮ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಪಂಜ ಇದರ ಸಕ್ರಿಯ ಸದಸ್ಯರಾಗಿ, ಕಾರ್ಯದರ್ಶಿ, ಖಜಾಂಜಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಪತ್ನಿ ಶ್ರೀಮತಿ ಸರೋಜಿನಿ ಕೆ. ಶಿಕ್ಷಕಿಯಾಗಿ ಪಡ್ಪಿನಂಗಡಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ರಕ್ಷಾ ಕೆ.ಕೆ. ಬಿಇ ಸಿವಿಲ್ ಇಂಜಿನಿಯರ್ ಮತ್ತು ಮಗ ಚಿಂತನ್ ಡಿಪ್ಲೊಮಾ ಆಟೋಮೊಬೈಲ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇವರು ಉತ್ತಮ ಕ್ರೀಡಾಪಟುವಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮತ್ತು ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.