ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಸಂಪನ್ನ

Advt_Headding_Middle
Advt_Headding_Middle

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಜ.8ರಂದು ಕಿರುಷಷ್ಠಿ ರಥೋತ್ಸವವು ನಡೆಯಿತು. ಪ್ರಪ್ರಥಮ ಬಾರಿಗೆ ದೇವಳದ ಸಿಬ್ಬಂದಿಗಳು ರಥವನ್ನು ಎಳೆದು ಕೃತಾರ್ಥರಾದರು. ತಳಿರು, ತೋರಣ, ಸೀಯಾಳ, ಅಡಿಕೆ,ಬಾಳೆ, ಬಾಳೆಗೊನೆಯಲ್ಲಿ ಅಲಂಕಾರದಲ್ಲಿ ಶೃಂಗಾರಗೊಂಡ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿಧಿವಿಧಾನಗಳನ್ನು ನೆರವೇರಿಸಿದರು.

ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಬಳಿಕ ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಶೋಭಾ ಗಿರಿಧರ್, ಲೋಕೇಶ್ ಮುಂಡೋಕಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ದಾಳ, ಕಿಶೋರ್ ಕೂಜುಗೋಡು ಸೇರಿದಂತೆ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಥ ಎಳೆದ ಸಿಬ್ಬಂದಿಗಳು:

ಕೋವಿಡ್-19 ನಿಯಮದ ಪ್ರಕಾರ ಶ್ರೀ ದೇವರ ರಥೋತ್ಸವ ನೆರವೇರಿತು. ಪ್ರಪ್ರಥಮ ಬಾರಿಗೆ ದೇವಳದ ಸಿಬ್ಬಂದಿಗಳೇ ಶ್ರೀ ದೇವರ ಕಿರುಷಷ್ಠಿ ರಥವನ್ನು ಎಳೆದು ಕೃತಾರ್ಥರಾದರು. ರಥೋತ್ಸವದ ಸಂದರ್ಭ ಸಿಬ್ಬಂದಿಗಳು ಸಮವಸ್ತ್ರ ಧರಿಸಿ, ಮಾಸ್ಕ್ ಧಾರಣೆ ಮಾಡಿ ಉತ್ಸವದಲ್ಲಿ ಪಾಲ್ಗೊಂಡರು. ಕೋವಿಡ್-19 ನಿಯಮಕ್ಕೆ ಅನುಗುಣವಾಗಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಶ್ರೀ ದೇವರ ರಥೋತ್ಸವ ಸಂಪನ್ನಗೊಡಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.