ಕೊರಗಜ್ಜನನ್ನು ಅಪಮಾನಿಸಿದವರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಿ ಜಯನಗರ ಕೊರಂಬಡ್ಕ ದೈವಸ್ಥಾನದಲ್ಲಿ ವಿಶೇಷ ಪೂಜೆ

Advt_Headding_Middle
Advt_Headding_Middle

ಇತ್ತೀಚೆಗೆ ವಿಟ್ಲದಲ್ಲಿ ವಿವಾಹ ಕಾರ್ಯಕ್ರಮ ಒಂದರ ಸಂದರ್ಭದಲ್ಲಿ ಆರಾಧ್ಯದೈವ ಶ್ರೀ ಕೊರಗಜ್ಜನ ವೇಷವನ್ನು ಧರಿಸಿ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಿ ಜಯನಗರ ಕೊರಂಬಡ್ಕ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ವಿಶೇಷ ಪೂಜೆ ಜ. 9ರಂದು ನೆರವೇರಿಸಲಾಯಿತು.


ಪೂಜೆ ಸಲ್ಲಿಸಿದ ಭಕ್ತಾಭಿಮಾನಿಗಳು ಕೊರಂಬಡ್ಕದ ಮಂತ್ರವಾದಿ ಗುಳಿಗ ದೈವದ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಸ್ವಾಮಿ ಕೊರಗಜ್ಜನ ಪುಣ್ಯ ಸಾನಿಧ್ಯದಲ್ಲಿ ಸ್ವಾಮಿ ಕೊರಗಜ್ಜ ನ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಿ ವಿಟ್ಲದಲ್ಲಿ ನಡೆದ ಘಟನೆಯಲ್ಲಿ ನಮ್ಮ ಸ್ವಾಮಿ ಕೊರಗಜ್ಜ ದೈವ ಗಳಿಗೆ ಅಪಮಾನ ಮಾಡಿರುವಂಥ ಅನ್ಯಧರ್ಮೀಯರಿಗೆ ಅಜ್ಜ ತನ್ನ ಕಾರಣಿಕವನ್ನು ತೋರಿಸಿ ಕೊಡಬೇಕಾಗಿ ಮತ್ತು ಈ ಸಂದರ್ಭದಲ್ಲಿ ಅಪರಾಧವನ್ನು ಯಾರೇ ಮಾಡಿದ್ದರೂ ಕೂಡ ತನ್ನ ಶಕ್ತಿಯನ್ನು ತೋರಿಸಿ ಶಿಕ್ಷೆಯನ್ನು ಕೊಡಬೇಕು ಎಂದು ಪ್ರಾರ್ಥಿಸಿದರು .
ಈ ಸಂದರ್ಭದಲ್ಲಿ ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಕೇಶವ ಮಾಸ್ಟರ್ ಹೊಸಗದ್ದೆ, ಕಾರ್ಯದರ್ಶಿ ಸುಂದರ ಕುದ್ಪಾಜೆ ಮುಖ್ಯ ಅರ್ಚಕರಾಗಿರುವ ಉಮೇಶ್ ಕುದ್ಪಾಜೆ ಹಾಗೂ ಶಿವಕುಮಾರ್ ಸ್ಥಳೀಯ ಮುಖಂಡರುಗಳು ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.