ಜ.14: ಪಂಜದಲ್ಲಿ ಶ್ರೀ ದುರ್ಗಾ ಪೂಜೆ , ರಂಗಪ್ರವೇಶ,ಯಕ್ಷೋತ್ಸವ ಸನ್ಮಾನ ಕಾರ್ಯಕ್ರಮ

Advt_Headding_Middle

 

ಶ್ರೀ ಶಾರದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ವತಿಯಿಂದ ಜ.14 ರಂದು ಶ್ರೀ ದುರ್ಗಾ ಪೂಜೆ, ರಂಗಪ್ರವೇಶ, ಯಕ್ಷೋತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶ್ರೀ ಶಾರದಾಂಬ ಯಕ್ಷಗಾನ ಕಲಾಕೇಂದ್ರದಲ್ಲಿ ಜರುಗಲಿದೆ.ಸಂಜೆ ಗಂಟೆ 4ರಿಂದ ಶ್ರೀ ದುರ್ಗಾ ಪೂಜೆ ಜರುಗಲಿದ್ದು. ಬಳಿಕ ರಂಗಪ್ರವೇಶ , ಯಕ್ಷೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಸಭಾ ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪೋಷಕರ ಸಮಿತಿ ಅಧ್ಯಕ್ಷ ಗೋವಿಂದಯ್ಯ ಕಾಂಚೋಡು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ, ಯಕ್ಷಗಾನದ ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ್ ಭಟ್, ವಳಲಂಬೆ ಯಕ್ಷಗಾನ ಕಲಾಕೇಂದ್ರ ಕೇಶವ ಹೊಸಳಿಕೆ ಉಪಸ್ಥಿತರಿರುವರು. ನಿವೃತ್ತ ಪಶುವೈದ್ಯ ಡಾ.ದೇವಿ ಪ್ರಸಾದ್ ಕಾನತ್ತೂರ್, ಹಿರಿಯ ವೇಷಭೂಷಣ ಸಹಾಯಕ ಚೋಮಣ್ಣ ನಾಯ್ಕ ಕಲ್ಮಡ್ಕ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ್ ಭಟ್ ರವರಿಗೆ ಗುರುವಂದನೆ ಜರುಗಲಿದೆ. ಸಂಜೆ ಗಂಟೆ 5 ರಿಂದ ರಂಗಪ್ರವೇಶ ವಿದ್ಯಾರ್ಥಿಗಳಿಂದ ಕುಶ ಲವ , ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಸತ್ಯ ಸ್ವರೂಪ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಎಂದು ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.