ಅನ್ಯಧರ್ಮೀಯ ವಿವಾಹ ಸಮಾರಂಭದಲ್ಲಿ ಕೊರಗಜ್ಜನ ವೇಷ ಧರಿಸಿ‌ ನೃತ್ಯ ಪ್ರಕರಣ

Advt_Headding_Middle
Advt_Headding_Middle

 

ಕುಂಡಡ್ಕ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಬೆಳ್ಳಾರೆ ವಿಎಚ್ ಪಿ, ಬಜರಂಗದಳದಿಂದ ಪ್ರಾರ್ಥನೆ

 ವಿಟ್ಲದ ಕೊಳ್ನಾಡಿನಲ್ಲಿ ಅನ್ಯ ಧರ್ಮೀಯ ವಿವಾಹ ಸಮಾರಂಭದಲ್ಲಿ ಮದುಮಗ ಕೊರಗಜ್ಜ ದೈವದ ವೇಷ ಹಾಕಿ ಕುಣಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಅವಮಾನಿಸಿದವರಿಗೆ ತಕ್ಕ ಶಿಕ್ಷೆ ನೀಡುವಂತೆ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಕೊರಗಜ್ಜ ಸಾನಿಧ್ಯದಲ್ಲಿ ಬೆಳ್ಳಾರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಾಲ್ಮೀಕಿ ಶಾಖೆಯ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು.

ಉಪ್ಪಳದ ಉಮ್ಮರುಳ್ಳು ಬಾಷಿತ್ ಎಂಬ ಮದುಮಗ ಕೊಳ್ನಾಡಿನ ವಧುವಿನ ಮನೆಗೆ ಬಂದಿದ್ದು ಈ ವೇಳೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ, ತಲೆಗೆ ಅಡಿಕೆ ಟೋಪಿ, ಮುಖಕ್ಕೆ ಮಸಿ ಬಳಿದುಕೊಂಡು ತನ್ನ ಸ್ನೇಹಿತರ ಜತೆ ಅಸಭ್ಯವಾಗಿ ನರ್ತಿಸಿದನ್ನು ಸಾಮಾಜಿಕ‌ ಜಾಲ ತಾಣದಲ್ಲಿ ಹರಿಬಿಟ್ಟಿದ್ದರು. ಇದರ ವಿರುದ್ದ ವ್ಯಾಪಕ‌ ಖಂಡನೆ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಕುಂಡಡ್ಕ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಕುಂಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಸಂಚಾಲಕ ಉಮೇಶ್ ಕೆಎಂಬಿ, ಬೆಳ್ಳಾರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಾಲ್ಮೀಕಿ ಶಾಖೆಯ ಸಂಚಾಲಕ ಸಚಿನ್ ರೈ ಪೂವಾಜೆ, ಐವರ್ನಾಡು ಶಾಖೆಯ ಅನಿಲ್‌ ಪೂಜಾರಿ,ಮುಕ್ಕೂರು ಬಜರಂಗದಳ ಘಟಕದ ಸಂಯೋಜಕ ಪ್ರಸಾದ್ ಕುಂಡಡ್ಕ, ಕ್ಷೇತ್ರದ ಅನುವಂಶಿಕ ಮೊಕ್ತೇಸರಾದ ವಾಸು ಕುಂಡಡ್ಕ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕುಶಾಲಪ್ಪ ಗೌಡ ಪೆರುವಾಜೆ, ದಯಾನಂದ ರೈ‌ ಕನ್ನೆಜಾಲು, ಜಯಂತ ಕುಂಡಡ್ಕ,‌ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.