Breaking News

ಸುಳ್ಯ ಪೊಲೀಸ್ ಠಾಣೆಯಲ್ಲಿ ಎಸ್ಸಿ ಎಸ್ಟಿ ಕುಂದುಕೊರತೆ ಸಭೆ

Advt_Headding_Middle

 

ಸುಳ್ಯ ಪೊಲೀಸ್ ಠಾಣೆಯಲ್ಲಿ ಎಸ್ಸಿಎಸ್ಟಿ ಕುಂದುಕೊರತೆ ಸಭೆಯು ಜ.9 ರಂದು ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ.ಎಸ್ಐ ಅಪರಾಧ ವಿಭಾಗದ ರತ್ನಕುಮಾರ್  ದಲಿತ ಜನಾಂಗಕ್ಕೆ ಏನಾದರೂ ಅನ್ಯಾಯವಾದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ.
ಅದೇ ರೀತಿ ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದೆ ಇದನ್ನು ಹೆಣ್ಣುಮಕ್ಕಳ ತಂದೆ-ತಾಯಿಗಳು ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು ಎಂದು ಹೇಳಿದರು .

ನಂತರ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮಾತನಾಡಿ ವಿಟ್ಲದ ಸಾಲೆತ್ತೂರಿನಲ್ಲಿ ನಡೆದಂತ ಮುಸ್ಲಿಂ ಸಮುದಾಯದ ಮದುಮಗ ಕೊರಗಜ್ಜನ ವೇಷಭೂಷಣ ಧರಿಸಿಕೊಂಡು ಕೊರಗ ಸಮುದಾಯವನ್ನು ಟೀಕೆ ಮತ್ತು ನಿಂದನೆ ಮಾಡಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಕೊರಗಜ್ಜನ ವೇಷಧರಿಸಿದ ಮದುಮಗನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ಪೊಲೀಸ್ ಠಾಣೆಯ ಪಿ.ಎಸ್ಐ ಅಪರಾಧ ವಿಭಾಗ ರತ್ನಕುಮಾರ್ ಅವರಲ್ಲಿ ಮನವಿ ಮಾಡಲಾಯಿತು .


ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ,ಜಿಲ್ಲಾ ಕಾರ್ಯದರ್ಶಿ ರಾಜೇಶ್ ಕೆ.ಜೆ, ಸತೀಶ್ ಗುಡ್ ಮಕ್ಕಿ, ಚೋಮ ಮರ್ಕಂಜ ,ಬಾಲಚಂದ್ರ ಭಾಸ್ಕರ ಮತ್ತು ಜಯಲಕ್ಷ್ಮಿ, ಸುಮಲತಾ,ಜಯಲಕ್ಷ್ಮಿ, ಸುಶೀಲ,ಮಂಜುನಾಥ,ಬಾಬು,ಕಾವೇರಿ, ಕೊರಗ,ಸೀತಾರಾಮ,ರವಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.