*
ಸುಬ್ರಹ್ಮಣ್ಯದ ಅಗರಿಕಜೆ ಎಂಬಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ಸ್ಯ ಮತ್ತು ಪ್ರಾಣಿ, ಪಕ್ಷಿ ಸಂಗ್ರಹಾಲಯ ಇಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಪ್ರಾಣಿ, ಪಕ್ಷಿ, ಮತ್ಸ್ಯ ಇವುಗಳ ಸಂವರ್ಧನೆ – ಪ್ರದರ್ಶನ – ಮಾರಟ ನಡೆಯಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ
ಜಲ ಪರಿಸರ ನಿರ್ವಹಣಾ ವಿಭಾಗ, ಮೀನುಗಾರಿಕಾ ಕಾಲೇಜು, ಎಕ್ಕೂರು ಇದರ ಸಹಾಯಕ ಪ್ರಾಧ್ಯಾಪಕ ಟಿ ಎಸ್ ಅಪ್ಪಣ್ಣ ಸ್ವಾಮಿ, ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್ ಎನ್,
ಕಡಬ ತಾಲೂಕು ಪಶು ಸಂಗೋಪನಾ ಸಹಾಯಕ ನಿರ್ದೇಶಕರು ಡಾ.ಅಜಿತ್,
ಪಶು ಚಿಕಿತ್ಸಾ ಕೇಂದ್ರ ಸುಬ್ರಹ್ಮಣ್ಯದ ವೈದ್ಯಾಧಿಕಾರಿ ಡಾ.ಮಲ್ಲಿಕಾ ವೆಂಕಟಾಚಲಪತಿ
ಝೂ ಪೆಟ್ ನ ಮಾಲಿಕ ನಿಶಿತ್ ಮುಂಡೋಡಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.