ಸುದ್ದಿ ಜನಾಂದೋಲನ ವೇದಿಕೆಯಿಂದ ಸುಳ್ಯದಲ್ಲಿ ಭ್ರಷ್ಟಾಚಾರ ವಿರೋಧಿ ದಿನಾಚರಣೆ

Advt_Headding_Middle
Advt_Headding_Middle

 

ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನ

ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಭ್ರಷ್ಟಾಚಾರ ವಿರೋಧಿ ದಿನಾಚರಣೆ ಸುಳ್ಯದಲ್ಲಿ ನಡೆಯಿತು.

ಸುಳ್ಯದ ಶ್ರೀಹರಿ ವಾಣಿಜ್ಯ ಸಂಕೀರ್ಣದ ಬಳಿಯಿಂದ ಸೇರಿದ ಜನರು ಅಲ್ಲಿಂದ ನಡೆದುಕೊಂಡು ಸುಳ್ಯದ ಶಿವಕೃಪಾ ಕಲಾಮಂದಿರಕ್ಕೆ ಬಂದು ಅಲ್ಲಿ ಸಭೆ ಸೇರಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದ‌ ವಹಿಸಿದ್ದರು. ಜ.26 ರ ಪ್ರಜಾಪ್ರಭುತ್ವ ದಿನ ಗ್ರಾಮ ಗ್ರಾಮದಲ್ಲಿ ಭ್ರಷ್ಟಾಚಾರ ವಿರೋಧಿ ನಡಿಗೆ ನಡೆಯಬೇಕು. ಪ್ರತೀ ಗ್ರಾಮ, ಸುಳ್ಯ ತಾಲೂಕು ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಪಂಬೆತ್ತಾಡಿ ಸಹಕಾರಿ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಅರಂತೋಡು ಸೊಸೈಟಿ ಸಹಕಾರಿ‌ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ಸುಳ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪೂಜಾ ಸಂತೋಷ್, ಗುತ್ತಿಗಾರು ಗ್ರಾ.ಪಂ.‌ ಸದಸ್ಯೆ ಲತಾ, ಆರ್.ಟಿ.ಐ. ಕಾರ್ಯಕರ್ತ ಡಿ.ಎಂ. ಶಾರೀಕ್, ಉದ್ಯಮಿ ಮೋನಪ್ಪ ನಾಯ್ಕ್ ಸೌಧಾಮಿನಿ, ಶೇಷನಯನ ದೇರಾಜೆ, ಕೃಷಿಕ ಚೆನ್ನಕೇಶವ ಜಾಲ್ಸೂರು, ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಅಮೈ, ಕೃಷಿಕ ಎಂ.ಡಿ. ವಿಜಯಕುಮಾರ್, ಸತೀಶ್ ಬೂಡುಮಕ್ಕಿ, ನ್ಯಾಯವಾದಿ ಶ್ರೀಹರಿ ಕುಕ್ಕುಡೇಲು, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಬಾಬು ಕೆ.ಎಂ., ನಂದರಾಜ್ ಸಂಕೇಶ, ಸುಬ್ರಹ್ಮಣ್ಯ ಭಟ್, ಆಲೆಟ್ಟಿ ಗ್ರಾ.ಪಂ. ಸದಸ್ಯೆ ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ, ಕೃಷ್ಣಪ್ಪ ನಾಯ್ಕ್ ಜಾಲ್ಸೂರು, ಮೋಹನ್ ಬಿ, ಗೋಪಾಲಕೃಷ್ಣ ಬೀದಿಗುಡ್ಡೆ, ವಿನೋದ್ ಕುಮಾರ್ ಎನ್, ಮೇದಪ್ಪ ಮಾನ್ಯಡ್ಕ ಮುರುಳ್ಯ, ಲತಾ ಕುದ್ಪಾಜೆ, ಜಯಲಕ್ಷ್ಮಿ ಜಯನಗರ, ಸರೋಜಾ ಈಶ್ವರ್, ವಿಜಯ ಕುಮಾರಿ ಮಯೂರಿ, ಶಿವಾನಂದ ರಂಗತ್ತಮಲೆ, ಸುದರ್ಶನ ಪಾತಿಕಲ್ಲು, ನವೀನ್ ಮಚಾದೋ, ರೂಪಾನಂದ, ಶಿವಕುಮಾರ್ ಕೊಯಿಂಗೋಡಿ, ಸತೀಶ್ ಕಾನತ್ತಿಲ, ಸುಂದರ ಪೂಜಾರಿ ಕೆ ಕಾನತ್ತಿಲ, ತೇಜಸ್ವಿ ಕಡಪಳ, ತಾಜುದ್ದೀನ್ ಅರಂತೋಡು, ಹೇಮಲತಾ ಡಿ.ಬಿ., ಅನಿಲ್ ಕುಮಾರ್, ಅಶೋಕ್ ಪೀಚೆಮನೆ, ಶಫೀಯ ಹಸೈನಾರ್ ಜಯನಗರ, ಮಂಜುನಾಥ್ ಮಡ್ತಿಲ, ಮೀನಾಕ್ಷಿ ಕುಡೆಕಲ್ಲು, ದಿನೇಶ್ ನಾಯಕ್, ಕಿಟ್ಟು ಅಜಿಲ, ಚಿದಾನಂದ ಬಾಂಜಿಕೋಡಿ, ಸಿದ್ದೀಕ್ ಕಟ್ಟೆಕಾರ್,  ಪರಮೇಶ್ವರ ಮೊದಲಾದವರಿದ್ದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಸ್ವಾಗತಿಸಿ, ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರಸ್ತಾವನೆಗೈದರು. ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ವಂದಿಸಿದರು.

ಸಭೆಯ ಬಳಿಕ ಲಂಚ, ಭ್ರಷ್ಟಾಚಾರ ದ ಪ್ರತಿಕೃತಿಯನ್ನು ದಹನ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.