ಈಡೇರದ ಬೇಡಿಕೆ : ಅಡ್ತಲೆಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸಾರ್ವಜನಿಕ ಸಭೆ

Advt_Headding_Middle
Advt_Headding_Middle

 

ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ಹೋರಾಟಕ್ಕೆ ನಿರ್ಧಾರ : ಸಮಿತಿ ರಚನೆ

 

ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವರ ವತಿಯಿಂದ ಸಾರ್ವಜನಿಕ ಸಭೆಯು ಜ.9 ರಂದು ಅಡ್ತಲೆಯಲ್ಲಿ ನಡೆಯಿತು. ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆಯವರು ಸಂಘಟನೆಯ ರಚನೆಯ ಉದ್ದೇಶದ ಬಗ್ಗೆ ಪ್ರಾಸ್ತವಿಕವಾಗಿ ಮಾಹಿತಿ ನೀಡುತ್ತಾ ಪ್ರಮುಖವಾಗಿ ಅತ್ಯಂತ ಅಗಲ ಕಿರಿದಾದ ಅರಂತೋಡು – ಎಲಿಮಲೆ ರಸ್ತೆ ಅಗಲೀಕರಣ, ಅಡ್ತಲೆಯಲ್ಲಿ ಸರಕಾರಿ ಸ್ವಾಮ್ಯದ BSNL ಟವರ್ ಕಾರ್ಯಾರಂಭ ಮತ್ತು ಅರಮನೆಗಯದಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಸುಸಜ್ಜಿತ ತೂಗು ಸೇತುವೆ ನಿರ್ಮಾಣ ಇತ್ಯಾದಿ ಹಲವಾರು ವರ್ಷಗಳ ಬೇಡಿಕೆಗಳಿಗೆ ಸರಕಾರದಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಘಟಿತ ಹೋರಾಟ ನಡೆಸುವ ಉದ್ದೇಶದಿಂದ ನಾಗರಿಕ ಹಿತರಕ್ಷಣಾ ವೇದಿಕೆ ರಚಿಸಲಾಗಿದೆ. ಅಡ್ತಲೆ ವಾರ್ಡ್ ಮಟ್ಟದಲ್ಲಿ ಕಳೆದ ಐದಾರು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಅನುದಾನಗಳ ನೆರವಿನಿಂದ ನಿರಂತರವಾಗಿ ನಡೆಯುತ್ತಿವೆ. ನಿಕಟಪೂರ್ವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಹಾಗೂ ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿದಿನಗಳು ವಾರ್ಡ್ ನ ಸರ್ವತೋಮುಖ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಣೆಗೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರೆಲ್ಲರಿಗೆ ಎಲ್ಲ ಸಾರ್ವಜನಿಕ ಬಂಧುಗಳ ಪರವಾಗಿ ಅಭಿನಂದನೆಗಳು. ಆದರೆ ತಳಮಟ್ಟದ ಜನಪ್ರತಿನಿದಿನಗಳ ಆರ್ಥಿಕ ಅನುದಾನದ ವ್ಯಾಪ್ತಿಯನ್ನು ಮೀರಿದ ಮತ್ತು ಅತೀ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ನಿರಂತರ ಮನವಿ ಮಾಡಿಯೂ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಗ್ರಾಮಸ್ಥರ ನೆರವಿನೊಂದಿಗೆ ಸಂಘಟಿತ ಹೋರಾಟ ಮಾಡಿ ನ್ಯಾಯ ಪಡೆಯುವ ಉದ್ದೇಶದಿಂದ ನಾಗರಿಕ ಹಿತರಕ್ಷಣಾ ವೇದಿಕೆ ರಚನೆ ಮಾಡಲಾಗಿದೆ. ಅರಂತೋಡು ಮತ್ತು ಮರ್ಕಂಜ ಉಭಯ ಗ್ರಾಮಗಳ ಜನತೆಯ ಅತೀ ತುರ್ತು ಮತ್ತು ಅತೀ ಅಗತ್ಯ ಬೇಡಿಕೆಯಾದ ಅರಂತೋಡು – ಎಲಿಮಲೆ ರಸ್ತೆ ಅಗಲೀಕರಣದ ಬಗ್ಗೆ ಮುಂದಿನ ಹೋರಾಟಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಉಭಯ ಗ್ರಾಮಸ್ಥರು ಸಲಹೆ ಸೂಚನೆ ನೀಡಬೇಕು ಎಂದು ವಿನಂತಿಸಿದರು.
ಸಾರ್ವಜನಿಕ ಸಭೆಯಲ್ಲಿ ಅರಂತೋಡು ಮತ್ತು ಮರ್ಕಂಜ ಗ್ರಾಮಗಳ ಸುಮಾರು 125ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕಳೆದ ಅನೇಕ ವರ್ಷಗಳಿಂದ ಅತ್ಯಂತ ಇಕ್ಕಟ್ಟಾದ ರಸ್ತೆಯಲ್ಲಿನ ಸಂಚಾರ ಸಂಕಷ್ಟಗಳನ್ನು ಅನುಭವಿಸಿದ ಗ್ರಾಮಸ್ಥರು ಸರಕಾರದ ವಿರುದ್ಧ ತೀವ್ರ ಅಸಮಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಮೊದಲೇ ಅತ್ಯಂತ ಇಕ್ಕಟ್ಟಾದ, ಕಿರಿದಾದ ರಸ್ತೆ. ಇದೀಗ ಮರ್ಕಂಜದಲ್ಲಿ ಆರಂಭವಾಗಿರುವ ಕಲ್ಲು ಕೋರೆ ಮತ್ತು ಜಲ್ಲಿ ಕ್ರಷರ್ ನಿಂದ ಕಲ್ಲು ಮತ್ತು ಜಲ್ಲಿ ತುಂಬಿದ 50ಕ್ಕೂ ಅಧಿಕ ಟಿಪ್ಪರ್ ಗಳು ಅತ್ಯಂತ ವೇಗವಾಗಿ, ಅಪಾಯಕಾರಿಯಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಲೋಡ್ ತುಂಬಿದ ಈ ಗಾಡಿಗಳು ಇತರ ವಾಹನಗಳಿಗೆ ಸೈಡ್ ಕೊಡುವುದಿಲ್ಲ. ಅಧಿಕ ಭಾರ ಹೇರಿಕೊಂಡು ಸಾಗುವ ಇವುಗಳಿಂದಾಗಿ ಈಗಿರುವ ರಸ್ತೆಗೆ ಹಾನಿಯಾಗುವುದು ಮಾತ್ರವಲ್ಲ ಮುಂದೆ ಆಫಘಾತಗಳು ನಡೆದು ಜೀವ ಹಾನಿ ಸಂಭವಿಸುವ ಅಪಾಯವೂ ಇದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ರಸ್ತೆ ಅಗಲೀಕರಣ ಬೇಡಿಕೆಯ ಈಡೇರಿಕೆಗಾಗಿ ಹೋರಾಟವನ್ನು ತೀವ್ರಗೊಳಿಸುವಂತೆ ಸಲಹೆ ನೀಡಿದರು. ಅಲ್ಲದೇ ಉಭಯ ಗ್ರಾಮಗಳ ಸಂಪೂರ್ಣ ಜನತೆ ಈ ಹೋರಾಟವನ್ನು ಬೆಂಬಲಿಸುವುದಾಗಿಯೂ ಭರವಸೆ ನೀಡಿದರು.
ಸಾರ್ವಜನಿಕರ ಸಲಹೆಯಂತೆ ರಸ್ತೆ ಅಗಲೀಕರಣ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಅಲ್ಲದೇ ಇನ್ನು ಮುಂದೆ ಎರಡೂ ಸಂಘಟನೆಗಳು ಜಂಟಿಯಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬರಲಾಯಿತು. ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ಚಿದಾನಂದ ಮಾಸ್ಟರ್ ಅಡ್ತಲೆ,ಅಧ್ಯಕ್ಷರಾಗಿ ಮೋಹನ್ ಅಡ್ತಲೆ, ,ಉಪಾಧ್ಯಕ್ಷರುಗಳಾಗಿ, ರೇಣುಕಾ ಬಲ್ಕಾಡಿ ಹಾಗೂ ಸಂತೋಷ್ ಕಿರ್ಲಾಯ, ಕಾರ್ಯದರ್ಶಿಯಾಗಿ ತೀರ್ಥರಾಮ ಕೊಚ್ಚಿ, ಜತೆ ಕಾರ್ಯದರ್ಶಿಯಾಗಿ ನಂದಕುಮಾರ್ ಅಡ್ತಲೆ, ಖಜಾಂಜಿಯಾಗಿ ಸುನಿಲ್ ಅಡ್ತಲೆ ಆಯ್ಕೆಯಾಗಿರುತ್ತಾರೆ
ಸದಸ್ಯರುಗಳಾಗಿ,
ಶರತ್ ಚೋಡಿಪಣೆ, ದಾಮೋದರ ಪೂಜಾರಿಮನೆ, ಯಶವಂತ ನಂಗಾರು, ಕಿಶೋರ್ ಅಡ್ಕ, ನರೇಂದ್ರ ಚಿಮಾಡು, ಯಶವಂತ ಚಿಮಾಡು, ಯತೀಶ್ ದೀಟಿಗೆ, ಜೀವನ್ ಪಿಂಡಿಮನೆ, ದೊಡ್ಡಯ್ಯ ಪಿಂಡಿಮನೆ, ಹರೀಶ್ ಎ. ಕೆ. ಅಡ್ತಲೆ ಗಿರೀಶ್ ಎ. ಹೆಚ್.ಅಡ್ತಲೆ,ಪುರುಷೋತ್ತಮ್ ಓಟೆಡ್ಕ, ಕಮಲಾಕ್ಷ ಓಟೆಡ್ಕ, ಕರುಣಾಕರ ಮೇಲಡ್ತಲೆ, ಚೇತನ್ ಎಮ್. ಎ. ಬೆದ್ರುಪಣೆ, ಶಿವರಾಮ ಕಲ್ಲುಗದ್ದೆ, ಜ್ಞಾನೇಶ್ ಕಾಯರ, ಚರಣ್ ಕಾಯರ, ಜಯಪ್ರಕಾಶ್ ಬಲ್ಕಾಡಿ, ರವೀಂದ್ರ ಬಾಳೆತೋಟ, ಲವಕುಮಾರ್ ಬಲ್ಕಾಡಿ, ಸತೀಶ್ ಬಲ್ಕಾಡಿ, ಪುರುಷೋತ್ತಮ್ ಮೇಲಡ್ತಲೆ ಆಯ್ಕೆಯಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.