Breaking News

ಸುಳ್ಯ ರೋಟರಿ ಶಾಲಾ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

Advt_Headding_Middle

 

ಅಧ್ಯಕ್ಷೆ : ಸನಿಹ ಶೆಟ್ಟಿ, ಕಾರ್ಯದರ್ಶಿ : ತುಷಾರ್ ಕಾರ್ತಿಕ್ 

ಸುಳ್ಯ ರೋಟರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು .
2021-22 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸನಿಹ ಶೆಟ್ಟಿ ಆಯ್ಕೆಯಾದರೆ , ಕಾರ್ಯದರ್ಶಿಯಾಗಿ ತುಷಾರ್ ಕಾರ್ತಿಕ್ ಪದವಿ ಸ್ವೀಕರಿಸಿದರು. ಪದಗ್ರಹಣವನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ರೋl PHF ಪ್ರಭಾಕರನ್ ನಾಯರ್ ನೆರವೇರಿಸಿ ಶುಭ ಹಾರೈಸಿದರು. ಉಳಿದಂತೆ ದಂಡಾಧಿಕಾರಿಯಾಗಿ 9ನೇ ತರಗತಿಯ ಪ್ರಣಮ್ಯ. ಎನ್. , ಉಪಾಧ್ಯಕ್ಷೆಯಾಗಿ ಸಾನಿಕ. ರೈ. , ಜತೆ ಕಾರ್ಯದರ್ಶಿಯಾಗಿ ಆಕರ್ಷ್, ಖಜಾಂಜಿಯಾಗಿ 10ನೇ ತರಗತಿಯ ರಮ್ಯ ಪಾರ್ವತಿ, ಕ್ಲಬ್ ಸೇವೆ ನಿರ್ದೇಶಕರಾಗಿ ನಿಖಿತಾ , ಸಮಾಜ ಸೇವಾ ನಿರ್ದೇಶಕರಾಗಿ ದ್ರುವ ಟಿ ಎಸ್, ಶೈಕ್ಷಣಿಕ ಸೇವಾ ನಿರ್ದೇಶಕರಾಗಿ ಸಿಂಚನ. P.A , ಅಂತರರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಹಿತಾಶ್ರೀ ಆಯ್ಕೆಯಾಗಿರುತ್ತಾರೆ . ಸುಳ್ಯ ರೋಟರಿಯ ಉಪಾಧ್ಯಕ್ಷರಾದ ರೋI ಚಂದ್ರಶೇಖರ್ ಪೇರಾಲು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಸಂಚಾಲಕರಾದ ರೊ.PP PHF ಗಿರಿಜಾಶಂಕರ್ ತುದಿಯಡ್ಕ ಇಂಟರಾಕ್ಟ ಕ್ಲಬ್ ನ ಬಗ್ಗೆ ವಿವರಿಸಿದರು. ಟ್ರಸ್ಟ್ ಖಜಾಂಜಿ ರೊ. PP PHF ಡಾI ಪುರುಷೋತ್ತಮ ಕೆ ಜಿ ಶುಭ ಹಾರೈಸಿದರು . ಟ್ರಸ್ಟ್ ಸದಸ್ಯರಾದ ರೋ.ಬೆಳ್ಯಪ್ಪ ಗೌಡ , ರೋ.ಆನಂದ ಖಂಡಿಗ , ಇಂಟರಾಕ್ಟ ಸಭಾಪತಿ ರೋ. ಮಾಧವ ಗೌಡ , ಶಾಲಾ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ, ರೋ. ಭಾಸ್ಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಿತ್ತಿ ಪತ್ರ ರಚನಾ ಸ್ಪರ್ಧೆ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ 9 ನೇ ತರಗತಿಯ ವಿದ್ಯಾರ್ಥಿನಿ ಮನಸ್ವಿಯನ್ನು ಗೌರವಿಸಲಾಯಿತು. 8ನೇ ತರಗತಿಯ ಸಿಂಚನ, ಗಾನವಿ , ಅವನಿ, ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಇಂಟರಾಕ್ಟ್ ಅಧ್ಯಕ್ಷೆ ಸನಿಹ ಶೆಟ್ಟಿ ಸ್ವಾಗತಿಸಿದರೆ ತುಷಾರ್ ಕಾರ್ತಿಕ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.