ಬೆಳ್ಳಾರೆ ಗ್ರಾಮದ ನೆಟ್ಟಾರು ಪೂಜಾರಿಮನೆಯಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪೂಜಾರಿಮನೆಯಲ್ಲಿ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳಾದ ಧರ್ಮಧೈವ ರುದ್ರಚಾಮುಂಡಿ, ಪಿಲಿಭೂತ, ವರ್ಣಾರ ಪಂಜುರ್ಲಿ,ಜಾವತೆ,ಕುಪ್ಪೆಪಂಜುರ್ಲಿ, ಗುಳಿಗ ಹಾಗೂ ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಜ.4 ರಿಂದ ಜ.6 ರವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ರಾಮಣ್ಣ ಗೌಡ ಮತ್ತು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.