ಕೊರಗಜ್ಜ ವೇಷ ಧರಿಸಿ ವಿಕೃತಿ : ಹಿಂದೂ ಸಂಘಟನೆಗಳ ಖಂಡನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

ಬಂಟ್ವಾಳ ತಾಲೂಕಿನ ವಿಟ್ಲ ಕೊಲ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಮದುವೆ ಕಾರ್ಯಕ್ರಮದಲ್ಲಿ ನಡೆದ ಔತಣಕೂಟದಲ್ಲಿ ಮದುಮಗ ಕೇರಳದ ಮಂಜೇಶ್ವರ ತಾಲೂಕಿನ ಉಪ್ಪಳದ ನಿವಾಸಿ ಉಮರುಲ್ ಭಾಶಿಕ್ ಎಂಬಾತ ತುಳುನಾಡಿನ ಕಾರಣಿಕ ಶಕ್ತಿಯಾದ ಕೊರಗಜ್ಜನ ವೇಷಧರಿಸಿ ತನ್ನ ಸಂಗಡಿಗರೊಡನೆ ಔತಣ ಕೂಟಕ್ಕೆ ಆಗಮಿಸಿ ವಿಕೃತಿ ಮೆರೆದ ಘಟನೆ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ ಇದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಲತೀಶ್ ಗುಂಡ್ಯ ಹೇಳಿದರು.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಹಲವಾರು ಸಮಯಗಳಿಂದ ಹಿಂದೂಗಳ ಆರಾಧ್ಯ ದೈವ ದೇವರನ್ನು ಅಪಹಾಸ್ಯ ಮಾಡುವುದು , ನಿಂದನ ಮಾಡುವುದು , ಆಶ್ಲೀಲ ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು , ಪವಿತ ನಾಗನ ಕ್ಷೇತ್ರಗಳನ್ನು ಅಪವಿತಗೊಳಿಸುವುದು , ದೇವಸ್ಥಾನ , ದೈವಸ್ಥಾನ , ಭಜನಾಮಂದಿರಗಳ ಕಾಣಿಕೆ ಡಬ್ಬಿಗಳಿಗೆ ಬೇಡದ ವಸ್ತುಗಳನ್ನು ಹಾಕಿ ಅಪವಿತಗೊಳಿಸುವುದು , ಮುಂದುವರಿದ ಭಾಗವಾಗಿ ಸ್ವಾಮಿ ಕೊರಗಜ್ಜನ ವೇಷ ಹಾಕಿ ವಿಚಿತ್ರವಾಗಿ ಕುಣಿದು ವಿಕೃತ ಸಂತೋಷ ಪಡುವ ಈ ಎಲ್ಲಾ ಘಟನೆಗಳು ಲಕ್ಷಾಂತರ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರಿಗೂ ತಕ್ಕ ಶಿಕ್ಷೆಯನ್ನು ತುಳುನಾಡಿನ ದೈರ್ವಿ ಶಕ್ತಿಗಳು ನೀಡಬೇಕೆಂದು ಮಂಗಳವಾರದAದು ದೇವಸ್ಥಾನ ದೇವಸ್ಥಾನ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ವಿನಂತಿಸುತ್ತದೆ. ಈ ಕಾರ್ಯಕ್ರಮದಲ್ಲಿ ದೈವಸ್ಥಾನ , ದೇವಸ್ಥಾನದ ಆಡಳಿತ ಮಂಡಳಿ , ಧಾರ್ಮಿಕ ಮುಖಂಡರು , ಸಂಘಟನೆಗಳು , ಸಂಘ ಸಂಸ್ಥೆಗಳು , ಭಕ್ತರು , ಸಮಸ್ತ ಹಿಂದೂಗಳು ಒಟ್ಟು ಸೇರಿ ಪ್ರಾರ್ಥನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಗೋಷ್ಟಿಯಲ್ಲಿ ವಿಎಚ್‌ಪಿ ಕಾರ್ಯದರ್ಶಿ ರಂಜಿತ್ ಸುಳ್ಯ, ತಾಲೂಕು ಸಂಯೋಜಕ ಸಂದೀಪ್ ವಳಲಂಬೆ, ಬಜರಂಗದಳ ಸುಳ್ಯ ಪ್ರಖಂಡ ಸಹ ಸಂಯೋಜಕ ನವೀನ್ ಎಲಿಮಲೆ, ಸುರಕ್ಷಾ ಪ್ರಮುಖ್ ಸನತ್ ಚೊಕ್ಕಾಡಿ, ಗೋರಕ್ಷ್ ಪ್ರಮುಖ್ ಅರವಿಂದ ಸುಳ್ಯ, ಪದವು ಶಾಖಾ ಸಂಯೋಜಕ್ ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.