Breaking News

ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆ

Advt_Headding_Middle

ಅಧ್ಯಕ್ಷರಾಗಿ ರಮೇಶ್ ನೀರಬಿದಿರೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ.ಭಾಗೀಶ್ ಆಯ್ಕೆ

ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆಯು ಜ.9ರಂದು ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಅಧ್ಯಕ್ಷ ರೋಹಿತ್ ಎಸ್.ಎನ್.ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಎ.ಯು.ಸಲಹೆ,ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.


ಗೌರವಾಧ್ಯಕ್ಷರಾಗಿ ರೋಹಿತ್ ಎಸ್.ಎನ್.,
ಅಧ್ಯಕ್ಷರಾಗಿ ರಮೇಶ್ ನೀರಬಿದಿರೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ.ಭಾಗೀಶ್, ಕೋಶಾಧಿಕಾರಿಯಾಗಿ ತಮೀಮ್ ಕೊಳಂಜಿಕೋಡಿ,ಗೌರವ ಸಲಹೆಗಾರರಾಗಿ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು. ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಭವಾನಿಶಂಕರ ಕಲ್ಮಡ್ಕ, ರಂಜಿತ್ ಕಲ್ಮಡ್ಕ, ಶಶಿಧರ ಕೂಟೇಲು, ಜತೆ ಕಾರ್ಯದರ್ಶಿಯಾಗಿ ಚಿದಾನಂದ ಕೊಯಿಕುಳಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಕೊಯಿಕುಳಿ, ಕ್ರೀಡಾ ಕಾರ್ಯದರ್ಶಿ ಯಾಗಿ ರಫೀಕ್ ನೀರಬಿದಿರೆಯವರನ್ನು ಆರಿಸಲಾಯಿತು. ನಿರ್ದೇಶಕರಾಗಿ ರವಿ ಎಂ.ಜೆ.,ಮಂಜುನಾಥ ಕಂದಡ್ಕ, ತೀರ್ಥಕುಮಾರ್ ಮೂಡೆಕಲ್ಲು, ಪುನೀತ್ ಉಬರಡ್ಕ,ಶೇಖರ ಕುದ್ಪಾಜೆ, ತೇಜಸ್ ಎಂ.ಬಿ.,ಶಫಿಕ್ ನೀರಬಿದಿರೆ, ಸದಸ್ಯರುಗಳಾಗಿ ರವೀಶ್ ಕಲ್ಮಡ್ಕ, ಜಯಂತ್ ಕೆ.ಬಿ,ರವಿ ಪಿ.,ಗಿರೀಶ್ ಕೆ,ಹುಸೈನ್,ಸೈಫುದೀನ್,ಸಂತೋಷ್ ಎಂ.ಬಿ.,ಹ್ಯಾರಿಸ್,ಆಶಿಫ್,ಆಶಿಕ್,ಅಬ್ದುಲ್ ರವೂಫ್,ಫಾರೂಕ್ ಮೊದಲಾದವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ, ನೂತನ ಅಧ್ಯಕ್ಷರ ಮಾತು,ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು .ನೂತನ ಕಾರ್ಯದರ್ಶಿ ಕೆ‌.ಟಿ.ಭಾಗೀಶ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.