ಸುಳ್ಯ ರಾಘವೇಂದ್ರ ಮಠದಲ್ಲಿ ಚೆನ್ನಕೇಶವ ದೇವರ ಜಳಕದ ಶುಭ ಸಂದರ್ಭದಲ್ಲಿ ಭಜನಾ ಸಂಕೀರ್ತನೆ

Advt_Headding_Middle
Advt_Headding_Middle

 

 

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಪ್ರಯುಕ್ತ ಪಯಸ್ವಿನಿ‌ ನದಿ‌ ತಟದಲ್ಲಿರುವ ‌ಶ್ರೀ ಗುರು ರಾಘವೇಂದ್ರ ಮಠದಲ್ಲಿ ಜ.11 ರಂದು ಚೆನ್ನಕೇಶವ ದೇವರ ಜಳಕದ ಶುಭ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ರಾತ್ರಿ ‌ಸಮಯದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಭಜನಾ ಸಂಕೀರ್ತನೆಯನ್ನು‌‌ ಮಠದ ಬೃಂದಾವನ‌ ಸೇವಾ ಟ್ರಸ್ಟ್ ನ ಅಧ್ಯಕ್ಷ ‌ಉದ್ಯಮಿ ಶ್ರೀಕೃಷ್ಣ‌ ಸೋಮಯಾಗಿ ಯವರು ದೀಪ ಬೆಳಗಿಸಿದರು. ಅತಿಥಿಗಳಾಗಿ ಸುಳ್ಯ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಶಿವಪ್ರಸಾದ್ ‌ಆಲೆಟ್ಟಿ ಉಪಸ್ಥಿತರಿದ್ದರು. ಮಠದ ಟ್ರಸ್ಟ್ ‌ಸಂಚಾಲಕರಾದ ಪ್ರಕಾಶ ಮೂಡಿತ್ತಾಯ‌ ರವರು ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ರಂಗ ಮಯೂರಿ ಕಲಾ ಶಾಲೆಯ ‌ವಿದ್ಯಾರ್ಥಿಗಳ ತಂಡ,‌ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ‌ ಬೆಟ್ಟಂಪಾಡಿ, ಆಲೆಟ್ಟಿ ‌ಶ್ರೀ ಸದಾಶಿವ ಭಜನಾ ಸಂಘ ‌,ಶ್ರೀ ಗುರು ರಾಘವೇಂದ್ರ ಮಠದ ಭಜಕರಿಂದ ‌ದೇವರ ಆಗಮನದ ತನಕ ಭಜನಾ ಸಂಕೀರ್ತನೆ ‌ನಡೆಯಿತು. ಮಠದ ಆಡಳಿತ ಸಮಿತಿ ಪದಾಧಿಕಾರಿಗಳು, ಟ್ರಸ್ಟ್ ನ ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.