ಸಂಪಾಜೆ ಗ್ರಾಮ ಸಭೆ

Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಶ್ರೀಮತಿ ಸುಹಾನ ಭಾಗವಹಿಸಿ ಇಲಾಖೆಯಾ ಮಾಹಿತಿಯನ್ನು ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ, ಗೋಪಮ್ಮ ವರದಿ ವಾಚಿಸಿದರು.

ಆರಂಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿದ ಬಿಪಿನ್ ರಾವತ್ ಹಾಗೂ ಸಂಗಡಿಗರಿಗೆ, ಸಂಪಾಜೆ ಹಿರಿಯ ಸಾಹಿತಿ ದೇವಿಪ್ರಸಾದ್ ಸಂಪಾಜೆಯವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ವರದಿ ಮೇಲೆ ಚರ್ಚೆ ನಡೆದು. ವರದಿಗೆ ಚಪ್ಪಾಳೆ ಮೂಲಕ ಅನುಮೋದನೆ ನೀಡಲಾಯಿತು. ವಿವಿಧ ಇಲಾಖೆಯ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.

ವಿಶೇಷವಾಗಿ ಕರೆಂಟು ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಸಂಪಾಜೆ ಗ್ರಾಮದ ರಾಜರಾಂಪುರ ಸಬ್ ಸ್ಟೇಷನ್ ಕಾಮಗಾರಿ , ವಿದ್ಯುತ್ ತಂತಿಗಳ ಬದಲಾವಣೆ, ನೆಲ್ಲಿಕುಮೆರಿ ಲೋ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಪರಿವರ್ತಕ ಅಳವಡಿಕೆ, ಮದ್ಯ ರಾತ್ರಿ ಕರೆಂಟ್ ಕಟ್ ಬಗ್ಗೆ ಚರ್ಚೆ ನಡೆಯಿತು.

ಚರ್ಚೆಯಲ್ಲಿ ಗಣಪತಿ ಭಟ್ , ಅಬೂಸಾಲಿ ಭಾಗವಹಿಸಿದ್ದರು. ವಿವಿಧ ಇಲಾಖೆಯ ಚರ್ಚೆಯಲ್ಲಿ ಅಶ್ರಫ್, ಕೇಶವ ಬಂಗ್ಲೆಗುಡ್ಡೆ, ರಹೀಮ್ ಬೀಜದಕಟ್ಟೆ, ಮಹಮದ್ ಕುಂಞ,ಗಣಪತಿ ಭಟ್, ಜಗದೀಶ್ ಕೆ.ಪಿ., ತ್ಯಾಗರಾಜ್, ರಿಯಾಜ್ ಎಸ್. ಎ., ನಾಗೇಶ್ ಪಿ. ಆರ್. ಭಾಗವಹಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಸೋಮಶೇಖರ್ ಕೊಯಿಂಗಾಜೆ, ಅಬೂಸಾಲಿ,ಸವಾದ್ ಗೂನಡ್ಕ, ಎಸ್. ಕೆ ಹನೀಫ್, ಸುಂದರಿ ಮುಂಡಡ್ಕ, ರಜನಿ ಶರತ್, ವಿಮಲಾ ಪ್ರಸಾದ್, ವಿಜಯ ಅಲಡ್ಕ, ಸುಮತಿ ಶಕ್ತಿವೇಲು ಅನುಪಮಾ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.