ನ. ಪಂ. ವ್ಯಾಪ್ತಿಯ ಗಾಂಧಿನಗರದ ಆಲೆಟ್ಟಿ ಕ್ರಾಸ್ ರಸ್ತೆಗೆ ಮರು ಡಾಮರೀಕರಣ ಆರಂಭ

Advt_Headding_Middle
Advt_Headding_Middle

 

 

ಸುಳ್ಯದಿಂದ  ಆಲೆಟ್ಟಿ ಕಡೆಗೆ ಪ್ರವೇಶಿಸುವ ಗಾಂಧಿನಗರ ಕ್ರಾಸ್ ನಲ್ಲಿ ರಸ್ತೆಯು ಹೊಂಡ ಗುಂಡಿ ಇದ್ದು ಇದಕ್ಕೆ ಮರು ಡಾಮರೀಕರಣ ಕಾಮಗಾರಿ ಕೆಲಸ ತ್ವರಿತ ಗತಿಯಲ್ಲಿ ‌ಆರಂಭಗೊಂಡಿದೆ. ನಗರ ಪಂಚಾಯತ್ ವ್ಯಾಪ್ತಿಗೆ ಸೇರಿದ ಈ ರಸ್ತೆಯ  ಕಾಮಗಾರಿಗೆ ಅಧ್ಯಕ್ಷ ರಲ್ಲಿ ಬೇಡಿಕೆ ಇರಿಸಲಾಗಿತ್ತು. ಸಾರ್ವಜನಿಕರ ಬೇಡಿಕೆಗೆ ‌ಸ್ಪಂದಿಸಿದ  ನಗರ ಪಂಚಾಯತ್ ಅಧ್ಯಕ್ಷ  ‌ವಿನಯಕುಮಾರ್ ಕಂದಡ್ಕ ರವರು ವಿಶೇಷ ‌ಮುತುವರ್ಜಿ ವಹಿಸಿ ‌ನಗರ ಪಂಚಾಯತ್ ನಿಂದ ರೂ.1.5 ಲಕ್ಷ   ‌ಅನುದಾನ‌ ಇರಿಸಲಾಗಿತ್ತು. 

ರಸ್ತೆಯು‌ ಸಂಪೂರ್ಣ ಹದಗೆಟ್ಟಿರುವುದರಿಂದ ಅನುದಾನದ ಕೊರತೆ ಇರುವುದರಿಂದ ತೇಪೆ ಕಾಮಗಾರಿ ‌ಮಾಡಲು ಸಾಧ್ಯವಿಲ್ಲದಿರವುದನ್ನು‌ ಮನಗಂಡು ಸಚಿವರನ್ನು ಸಂಪರ್ಕಿಸಿ ವಿಶೇಷ ಅನುದಾನಕ್ಕೆ ಬೇಡಿಕೆ ಇರಿಸಿದಾಗ ಒಪ್ಪಿಗೆ ನೀಡಿದ ಸಚಿವರು ಗುತ್ತಿಗೆದಾರರನ್ನು‌ ಕರೆಸಿ ಕೆಲಸ ನಿರ್ವಹಿಸಿಕೊಡುವಂತೆ ಸೂಚಿಸಿದರು. ಒಟ್ಟು ಅಂದಾಜು ರೂ.8 ಲಕ್ಷದಲ್ಲಿ ತುರ್ತಾಗಿ ಕೆಲಸ  ನಡೆಯಲಿದ್ದು ಈಗಾಗಲೇ   ಸಡಕ್ ಯೋಜನೆಯಲ್ಲಿ ನಾಗಪಟ್ಟಣದಿಂದ  ರಸ್ತೆ ಕಾಮಗಾರಿ ಕೆಲಸ ‌ನಿರ್ವಹಿಸುತ್ತಿರುವ ಗುತ್ತಿಗೆದಾರರಾದ ನಾರಾಯಣ ಕೇಕಡ್ಕ ರವರಿಗೆ ಸಚಿವರು ಸೂಚನೆ ನೀಡಿದ ಮೇರೆಗೆ ಇಂದಿನಿಂದ ಕೆಲಸ ‌ಆರಂಭಿಸಿರುತ್ತಾರೆ.ಮುಖ್ಯ ಬೇಡಿಕೆಯು ಇದೀಗ ‌ಈಡೇರುತ್ತಿದ್ದು ಈ ಭಾಗದ ಪ್ರಯಾಣಿಕರು ‌ನಿಟ್ಟುಸಿರು ಬಿಡುವಂತಾಗಿದೆ. 

ಜ.13 ರಂದು ‌ಬೆಳಗ್ಗಿನಿಂದ ಸಂಪೂರ್ಣಮರುಡಾಮರೀಕರಣ ಕೆಲಸ ‌ನಡೆಯಲಿರುವುದರಿಂದ‌ ಮಧ್ಯಾಹ್ನದ ತನಕ‌ ರಸ್ತೆ ‌ಬಂದ್ ಮಾಡಲಾಗುವುದು.‌ ಆಲೆಟ್ಟಿ ಕಡೆಯಿಂದ ಬರುವ ವಾಹನ ಸವಾರರು‌‌ ‌ಪರ್ಯಾಯ  ಕಲ್ಲುಮುಟ್ಲು ರಸ್ತೆಯಾಗಿ‌ ಸಂಚರಿಸಿ ‌ಸಾರ್ವಜನಿಕರು ಸಹಕರಿಸಬೇಕಾಗಿ ನಗರ ಪಂಚಾಯತ್ ‌ಅಧ್ಯಕ್ಷ ವಿನಯಕುಮಾರ್ ‌ಕಂದಡ್ಕ ರವರು‌‌‌ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.