ಕೊಲ್ಲಮೊಗ್ರು : 5.25 ಕೋಟಿಯ ಕಾಮಗಾರಿಗೆ ಸಚಿವ ಅಂಗಾರರಿಂದ ಗುದ್ದಲಿ ಪೂಜೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೊಲ್ಲಮೊಗ್ರು – ಮಾವಿನಕಟ್ಟೆ ಸಂಪರ್ಕ ರಸ್ತೆಯ 5.5 ಕಿ.ಮೀ ರಸ್ತೆ ಕಾಮಗಾರಿ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಕೊಲ್ಲಮೊಗ್ರು – ಕಟ್ಟ -ಮಾವಿನಕಟ್ಟೆ ರಸ್ತೆಯನ್ನು ವಿಶೇಷ ಅನುದಾನ ತರಿಸಿ PMGSY ಯೋಜನೆಯ ಅಡಿಯಲ್ಲಿ 5.25 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟೀಕರಣ ಇಂದು ಕಟ್ಟ ಗೋವಿಂದ ನಗರದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ಕಟ್ಟಗೋವಿಂದ ನಗರದಿಂದ ಕೊಲ್ಲಮೊಗ್ರ ಭಾಗಕ್ಕೆ 1.5 ಕಿ.ಮೀ, ಕಟ್ಟ ಗೋವಿಂದ ನಗರದಿಂದ ಮಾವಿನಕಟ್ಟೆ ರಸ್ತೆ ಕಡೆ 3.61 ಕಿ.ಮೀ, ಕಟ್ಟ ಕಾಲನಿ ಬಳಿ 4.9 ಮೀ ರಸ್ತೆ ಕಾಂಕ್ರೀಟ್ ನಡೆಯಲಿದೆ.

ಗುದ್ದಲಿ ಪೂಜೆ ಆರಂಭದಲ್ಲಿ ಕೇಶವ ಕಟ್ಟ ಮತ್ತು ಜಯಪ್ರಕಾಶ್ ಕಜ್ಜೋಡಿ ಸಚಿವರಿಗೆ ಹೂ ಮಾಲೆ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ, ಬಿಜೆಪಿ ಎಸ್ ಸಿ ಮೋರ್ಚಾದ ಅಧ್ಯಕ್ಷ ಅಚ್ಯುತ ಗುತ್ತಿಗಾರು, ಬಿಜೆಪಿ ಜಿಲ್ಲಾ ಓ.ಬಿ.ಸಿ ಕೋಶಾಧಿಕಾರಿ ಮಾಧವ ಚಾಂತಾಳ, ಕೊಲ್ಲಮೊಗ್ರು ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ಕೊಲ್ಲಮೊಗ್ರು ಗ್ರಾ.ಪಂ ಸದಸ್ಯರಾದ ಮೋಹಿನಿ ಕಟ್ಟ, ಶುಭಲತಾ ಕಟ್ಟ, ಶಿವಮ್ಮ ಕಟ್ಟ, ಕೊಚ್ಚಿಲ ಶ್ರೀ ಮಯೂರವಾಹನ ದೇವಸ್ಥಾನದ ಅದ್ಯಕ್ಷರಾದ ಜಯಪ್ರಕಾಶ್ ಕಟ್ಟ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಅಧ್ಯಕ್ಷರಾದ ಜಯಂತ ಬಾಳುಗೋಡು, ಉಪಾಧ್ಯಕ್ಷರಾದ ವಿಜಯ ಅಂಗಣ, ಹಿರಿಯರಾದ ನಾರಾಯಣ ಭಟ್ ಕಟ್ಟ, ಮಾಜಿ ಗ್ರಾ.ಪಂ. ಸದಸ್ಯರಾದ ಕೇಶವ ಕಟ್ಟ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಹಿಮ್ಮತ್.ಕೆ.ಸಿ, ಕೊಲ್ಲಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಟಿ ಎನ್, ದೇವಚಳ್ಳ ಗ್ರಾ.ಪಂ. ಮಾಜಿ ಸದಸ್ಯ ತಿಮ್ಮಪ್ಪ ಗೌಡ ಮಾವಜಿ, ಕೊಲ್ಲಮೊಗ್ರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಾಕೇಶ್ ಮುಳ್ಳುಬಾಗಿಲು, ಕೊಲ್ಲಮೊಗ್ರು ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಉದಯ ಶಿವಾಲ, ಜಯಪ್ರಕಾಶ್ ಕಜ್ಜೋಡಿ, ಕಿಶೋರ್ ಕುಮಾರ್ ಕೂಜುಗೋಡು, ಶರತ್ ಕಲ್ಲೇಮಠ, ಕೊಚ್ಚಿಲ ಶ್ರೀ ಮಯೂರವಾಹನ ದೇವಸ್ಥಾನದ ಸದಸ್ಯರಾದ ಪದ್ಮಯ್ಯ ಹಾಗೂ ಸ್ಥಳೀಯರಾದ ಗಿರೀಶ್ ಮಾವಾಜಿ, ಸುಬ್ರಹ್ಮಣ್ಯ ಕರಂಗಲ್ಲು, ನಾರಾಯಣ.ಪಿ ಮುಳ್ಳುಬಾಗಿಲು, ನವೀನ್ ಕೊಪ್ಪಡ್ಕ, ಉಮೇಶ್ ಕಜ್ಜೋಡಿ, ಗೌಡಿಕೆ ಮೇದಪ್ಪ ಗೌಡ, ಸುರೇಶ್ ಮಿತ್ತಮಜಲು ಸೇರಿದಂತೆ ಇತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.