ಯುವಕರು ಆತ್ಮನಿರ್ಭರ ಯೋಜನೆಯ ಸದುಪಯೋಗ ಪಡೆದು ಯಶಸ್ವಿ ಸ್ವ ಉದ್ಯಮಿಗಳಾಗಿ – ಎಸ್.ಅಂಗಾರ
ಸುಳ್ಯದ ಶುಭಾ ಕಾಂಪ್ಲೆಕ್ಸ್ ನಲ್ಲಿ ಕಳೆದ 9 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕುಮ್ ಕುಮ್ ಪ್ಯಾಶನ್ ಬಟ್ಟೆ ಮಳಿಗೆಯಲ್ಲಿ ಜ.12 ರಂದು ಖರೀದಿಯ ಮೇಲಿನ ಲಕ್ಕಿ ಕೂಪನ್ ನ ಬಂಪರ್ ಬಹುಮಾನದ ಡ್ರಾ ವನ್ನು ಮೀನುಗಾರಿಕಾ ಒಳನಾಡು ಜಲಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ರವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ದ್ವಾರಕಾ ಹೋಟೆಲ್ ಮಾಲಕ ವಸಂತ ಭಟ್ , ಇಂಜಿನಿಯರ್ ಕೃಷ್ಣ ರಾವ್, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಅಚ್ಚುತ ಗುತ್ತಿಗಾರು, ವೆಂಕಟ್ ವಳಲಂಬೆ, ಸುಭೋದ್ ಶೆಟ್ಟಿ ಮೇನಾಲ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭಿಸಿದ ಲಕ್ಕಿ ಕೂಪನ್ ಬಂಪರ್ ಬಹುಮಾನ (ಡಿಯೋ ಸ್ಕೂಟರ್) ಕೂಪನ್ ನ್ನು ಆರಿಸಿ ಅದೃಷ್ಟವಂತ ಗ್ರಾಹಕರನ್ನು ಸಚಿವರು ಆಯ್ಕೆ ಮಾಡಿದರು. ಬಳಿಕ ಮಾತನಾಡಿದ ಸಚಿವರು “ಈಗಾಗಲೇ ಯುವಕರು ಸ್ವ ಉದ್ಯಮವನ್ನು ನಡೆಸಲು ಪೂರಕವಾದ ಆತ್ಮ ನಿರ್ಭರ ಯೋಜನೆಯನ್ನು ಪ್ರಧಾನ ಮಂತ್ರಿ ಯವರು ಜಾರಿಗೊಳಿಸಿದ್ದಾರೆ. ಇದರ ಸದುಪಯೋಗ ಪಡೆದುಕೊಂಡು ವ್ಯಾಪಾರ ಉದ್ಯಮದಲ್ಲಿ ತೊಡಗಿಸಿ ವಿಶ್ವಾಸಾರ್ಹ ಸೇವೆಯನ್ನು ಗ್ರಾಹಕರಿಗೆ ನೀಡುವ ಮೂಲಕ ಯಶಸ್ಸು ಕಾಣಬಹುದು” ಎಂದು ಕಿವಿ ಮಾತು ಹೇಳಿದರು.
ಅತಿಥಿಗಳು ಆಕರ್ಷಕ ಬಹುಮಾನದ ಲಕ್ಕಿ ಕೂಪನ್ ಡ್ರಾ ವನ್ನು ನೆರವೇರಿಸಿದರು.
ವಸ್ತ್ರ ಮಳಿಗೆಯ ಮಾಲಕರಾದ ಭೀಮ್ ರಾಮ್ ಪಟೇಲ್, ಧನ್ ರಾಮ್ ಪಟೇಲ್ ರವರು ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಳಿಗೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.