ಕಳಂಜ ಗ್ರಾ.ಪಂ.ನಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಉದ್ಘಾಟನೆ

Advt_Headding_Middle
Advt_Headding_Middle

 

ಕಳಂಜ ಗ್ರಾಮ ಪಂಚಾಯತ್ ನ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭ ಜ.11 ರಂದು ನಡೆಯಿತು. ಮುಖ್ಯ ಗ್ರಂಥಾಲಯವನ್ನು ಮಾಜಿ ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಉದ್ಘಾಟಿಸಿದರು. ಡಿಜಿಟಲ್ ಕಾರ್ನರ್ ಅನ್ನು ಸ್ಕ್ಯಾಡ್ಸ್ ಮಂಗಳೂರು ಇದರ ಮಾಜಿ ಅಧ್ಯಕ್ಷ ವಿ. ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ. ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆ. ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಗ್ರಂಥಾಲಯ ಅಧಿಕಾರಿ ಶ್ರೀಮತಿ ಗಾಯತ್ರಿ, ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಎನ್, ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ಈ ಸಂದರ್ಭ ಪೂರ್ಣ ಸಹಕಾರಕ್ಕಾಗಿ ಮಾಜಿ ತಾ.ಪಂ ಸದಸ್ಯೆ ಜಾಹ್ನವಿ ಕಾಂಚೋಡು, ಮಾಜಿ ಗ್ರಾಪಂ ಅಧ್ಯಕ್ಷೆ ಯಶೋದಾ ಮಣಿಮಜಲು, ಆರಂಭದಿಂದಲೇ ಗ್ರಂಥಾಲಯದ ಸದಸ್ಯರಾಗಿದ್ದು ಸದಾ ಗ್ರಂಥಾಲಯದ ಪ್ರಯೋಜನ ಪಡೆಯುತ್ತಿರುವ ಶ್ರೀಕೃಷ್ಣ ಚೊಕ್ಕಾಡಿ ಇವರುಗಳನ್ನು ಗೌರವಿಸಲಾಯಿತು.

ಪಿಡಿಒ ಶ್ರೀಧರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ವಂದಿಸಿದರು. ಗ್ರಂಥಪಾಲಕಿ ಶ್ರೀಮತಿ ಪುಷ್ಪಾವತಿ, ಪಂಚಾಯತ್ ಸಿಬ್ಬಂದಿಗಳಾದ ತಿರುಮಲೇಶ್ವರ ಮುಂಡುಗಾರು, ಗಿರಿಧರ ಕೆ, ಪುರುಷೋತ್ತಮ ಸಹಕರಿಸಿದರು. ಗ್ರಾ.ಪಂ ಸದಸ್ಯರು,ಸ್ಥಳೀಯ ಶಾಲಾ ಮಕ್ಕಳು, ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.