ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ. ಟ್ರಸ್ಟ್ ರಿ, ಸುಳ್ಯ ತಾಲೂಕು ಇದರ ಮಾರ್ಗದರ್ಶನದಲ್ಲಿ ಪ್ರಗತಿ ಬಂಧು -ಸ್ವಸಹಾಯ ಸಂಘಗಳ ಒಕ್ಕೂಟಗಳು ಕೊಡಿಯಾಲ ಮತ್ತು ಪಂಜಿಗಾರು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜ. 9ರಂದು ದ. ಕ. ಜಿ. ಪ. ಉ. ಹಿ. ಪ್ರಾ ಶಾಲೆ ಕೊಡಿಯಾಲದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ಳಾರೆ ವಲಯದ ಅಧ್ಯಕ್ಷ ಆನಂದ. ಪಿ. ವಹಿಸಿದ್ದರು. ಉದ್ಘಾಟನೆ ಮತ್ತು ಧಾರ್ಮಿಕ ಉಪನ್ಯಾಸವನ್ನು ಪತ್ತೂರು ವಿವೇಕಾನಂದ ಕಾಲೇಜು ಸಂಸ್ಕೃತ ಪ್ರಧ್ಯಾಪಕ ಶ್ರೀಶ ಕುಮಾರ್ ಎಂ.ಕೆ ಮಾಡಿದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರು. ಶ್ರೀ ಕ್ಷೆ.ಧ, ಗ್ರಾ, ಅ, ಯೋ. ಬಿ. ಸಿ ಟ್ರಸ್ಟ್ (ರಿ ) ದ. ಕ. ಜಿಲ್ಲೆ-2 ಪುತ್ತೂರು ಇದರ ನಿರ್ದೇಶಕ ಪ್ರವೀಣ್ ಕುಮಾರ್
ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್ ರೈ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಸ್.ಎನ್. ಪ್ರಸಾದ್ ಮತ್ತು ಗೌರವ ಉಪಸ್ಥಿತರಾಗಿ ಶ್ರೀ ಕ್ಷೆ. ಧ ಗ್ರಾ ಯೋಜನೆ ಬಿ. ಸಿ ಟ್ರಸ್ಟ್ ಸುಳ್ಯ ತಾಲ್ಲೂಕು ಇದರ ಯೋಜನಾಧಿಕಾರಿ ಚೆನ್ನಕೇಶವ, ಕೊಡಿಯಾಲ ಗ್ರಾಮ ಪಂಚಾಯತ್, ಸದಸ್ಯ ಕರುಣಾಕರ ಆಳ್ವ, ಪ್ರಗತಿ ಬಂಧು ಒಕ್ಕೂಟ ಕೊಡಿಯಾಲ ಇದರ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಪ್ರಭು, ದ. ಕ. ಜಿ ಪ ಉ ಪ್ರಾ ಕೊಡಿಯಾಲ ಇದರ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಮತಿ ಸುಂದರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಜ್ಯಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಿಸಲಾಯಿತು. ಕೃಷಿ ಪೂರಕವಾಗಿ ಅನುದಾನ ಮಂಜೂರಾತಿ ಪತ್ರ ವಿತರಿಸಲಾಯಿತು. ಸೆಲ್ಕೋ ಸೋಲರ್ ಲೈಟ್ ವಿತರಣೆ, ಕುಕ್ ಸ್ಟವ್ ವಿತರಣೆ ಮಾಡಲಾಯಿತು. ನೂತನ ಸಂಘ ಶ್ರೀ ಸತ್ಯ ನಾರಾಯಣ ಪ್ರಗತಿ ಬಂಧು ಸಂಘವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ವಸಂತ್ ಎಲ್, ಸೇವಾ ಪ್ರತಿನಿಧಿಗಳಾದ ಶ್ರೀಮತಿ ವನಿತಾ, ಶ್ರೀಮತಿ ಕವಿತಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಜ್ಯಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಿಸಲಾಯಿತು, ಕೃಷಿ ಪೂರಕ ವಾಗಿ ಅನುದಾನ ಮಂಜೂರಾತಿ ಪತ್ರ ವಿತರಿಸಲಾಯಿತು, ಸೆಲ್ಕೋ ಸೋಲರ್ ಲೈಟ್ ವಿತರಣೆ, ಕುಕ್ ಸ್ಟವ್ ವಿತರಣೆ ಮಾಡಲಾಯಿತು. ನೂತನ ಸಂಘ ಶ್ರೀ ಸತ್ಯ ನಾರಾಯಣ ಪ್ರಗತಿ ಬಂಧು ಉದ್ಘಾಟಿಸಲಾಯಿತು. ಮೇಲ್ವಿಚಾರಕರು ವಸಂತ್ ಎಲ್. ಸ್ವಾಗತಿಸಿ, ಭಾಸ್ಕರ ವಂದಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.