Breaking News

ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ವತಿಯಿಂದ ಇರುವಂಬಳ್ಳದಲ್ಲಿ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ

Advt_Headding_Middle

ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ಇರುವಂಬಳ್ಳ ಇದರ ವತಿಯಿಂದ ತಾಜುಲ್ ಉಲಮಾ ಹಾಗು ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ತಾಜುಲ್ ಉಲಮಾ ನಗರ ಇರುವಂಬಳ್ಳದಲ್ಲಿ ಜನವರಿ 10 ರಂದು ನಡೆಯಿತು.

ಎಸ್ ವೈ ಎಸ್ ಅಧ್ಯಕ್ಷರಾದ ಕೆ.ಐ.ಮುಹಮ್ಮದ್ ಕುಂಞಿ ಕೋದಪ್ಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹನೀಫ್ ಸಅದಿ ಮೈತ್ತಡ್ಕ ಉದ್ಘಾಟಿಸಿದರು.

ಮುಖ್ಯ ಪ್ರಭಾಷಣವನ್ನು ಮೊಗರ್ಪಣೆ ಮುದರ್ರಿಸ್ ಹಾಫಿಳ್ ಶೌಕತ್ ಅಲಿ ಸಖಾಫಿ ಕುಶಾಲನಗರ ಮಾಡಿದರು.

ದುಆ ಮತ್ತು ನಸೀಹತ್ ನ್ನು ಅಸ್ಸಯ್ಯದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಸಂಘಟನೆಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಎ.ಬಿ.ಅಶ್ರಫ್ ಸಅದಿ ಅಡ್ಕ, ಪಳ್ಳಿಕುಂಞಿ ಇರುವಂಬಳ್ಳ ಹಾಗು ಎಸ್ಸೆಸ್ಸೆಫ್ ಪ್ರತಿಭೋತ್ಸವದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಮಹ್ಶೂಕ್ ಕೋದಪ್ಪಾಡಿ, ಸಲೀಂ ಪುಳಿಯಡಿ, ಅಮೀರ್ ಮಾವಿನಪಳ್ಳ, ರಿಶಾಕ್ ಕೇನಾಜೆ ಹಾಗು ನವಾಝ್ ಇರುವಂಬಳ್ಳ ರವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಹುಸೈನ್ ತಂಙಳ್ ಆದೂರ್, ಹಮೀದ್ ಬೀಜಕೊಚ್ಚಿ, ಲತೀಫ್ ಝೌಹರಿ ಮೇನಾಲ,ಇರುವಂಬಳ್ಳ ಖತೀಬ್ ಶಾಹುಲ್ ಹಮೀದ್ ಸಖಾಫಿ,ಬಷೀರ್ ಸಖಾಫಿ ಮೊಗರ್ಪಣೆ,ಹಸೈನಾರ್ ಬಾ ಅಹ್ಸನಿ ಗೋರಡ್ಕ ಹಾಗು ಸಿದ್ದೀಕ್ ಕಟ್ಟೆಕಾರ್ ಉಪಸ್ಥಿತರಿದ್ದರು.

ಆರಂಭದಲ್ಲಿ ಅಬ್ದುಲ್ ಖಾದರ್ ಸಅದಿ ಗೋರಡ್ಕ ರವರು ಸ್ವಾಗತಿಸಿ, ಕೊನೆಯಲ್ಲಿ ಹಾಜಿ ಕೆ.ಪಿ.ಹಸೈನಾರ್ ಮದನಿ ಕೋದಪ್ಪಾಡಿಯವರು ವಂದಿಸಿದರು.

ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಸುಣ್ಣಮೂಲೆ, ಹಾಗೂ ಅಬ್ಬಾಸ್ AB, ನಿರೂಪಿದರು.

ಮಗ್ರಿಬ್ ನಮಾಝ್ ನ ನಂತರ ಮೌಲೂದ್ ಪಾರಾಯಣ ನಡೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.