ಸುಳ್ಯ ಕಸಬಾ ಗ್ರಾಮದ ಜಯನಗರ ಶಾಲಾ ಬಳಿಯಿಂದ ಕೊಯಿಂಗೋಡಿಗೆ ಸಾಗುವ ರಸ್ತೆ ಬಳಿ ಇರುವ ನಾರಾಯಣ ನಾಯ್ಕರ ಮನೆಯ ಕಂಪೌಂಡ್ ಬದಿ ಮಕ್ಕಳಿಗೆ ಉಪಯೋಗಿಸಿದ ಪ್ಯಾಂಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ರಸ್ತೆಗೆ ಎಸೆದು ಮಲೀನಗೊಳಿಸುತ್ತಿರುವ ವಿಚಾರವಾಗಿ ಸ್ಥಳಿಯ ನಿವಾಸಿ ಪಿ. ನಾರಾಯಣ ನಾಯ್ಕ್ ಎಂಬವರು ದೂರು ನೀಡಿರುವ ಘಟನೆ ವರದಿಯಾಗಿದೆ.
ಜಯನಗರದಲ್ಲಿ ನಿವೃತ್ತ ಶಿಕ್ಷಕ ಪಿ.ನಾರಾಯಣ ನಾಯ್ಕ್ ಎಂಬವರು ವಾಸವಿರುವ ಮನೆಯ ಪಕ್ಕ ದಿನನಿತ್ಯ ಮಕ್ಕಳಿಗೆ ಉಪಯೋಗಿಸಿದ ಪ್ಯಾಂಪರ್ಸ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಮಲೀನಗೊಳಿಸುತ್ತಿರುವ ಬಗ್ಗೆ ಸ್ಥಳಿಯ ನ.ಪಂ. ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಪತ್ರದ ಮೂಲಕ ತಿಳಿಸಲಾಗಿದ್ದು, ಈತನಕ ಈ ವಿಚಾರವಾಗಿ ಯಾವುದೇ ಪ್ರಕ್ರಿಯೆ ನಡೆಸಲಾಗಿಲ್ಲ. ತ್ಯಾಜ್ಯ ಎಸೆಯುವವರ ಬಗ್ಗೆ ನ.ಪಂ. ಸದಸ್ಯರ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಂತಹವರ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.