Breaking News

ಅಡಮಾನ ಸಾಲ : ಈ‌ ಹಿಂದಿನ ನಿಯಮದಂತೆ ವಿತರಿಸಲು ಸರಕಾರ ಆದೇಶ

Advt_Headding_Middle

 

 

ತಂತ್ರಾಂಶ ಸಮಸ್ಯೆ ಸರಿಯಾಗಹವ ತನಕ ಕೃಷಿಕರಿಗೆ ಸಹಕಾರ ಸಂಘದಿಂದ ನೀಡುವ ಸಾಲ ವಿತರಣೆಯನ್ನು ಈ ಹಿಂದಿನಂತೆಯೇ ನೀಡಲು ಕ್ರಮ ಕೈಗೊಳ್ಳುವಂತೆ ಸರಕಾರ ಆದೇಶ ನೀಡಿದೆ.

ಕೆಲ ತಿಂಗಳ ಹಿಂದೆ ಸರಕಾರವು ಸಹಕಾರಿ ಸಂಘದಿಂದ ನೀಡುವ ಸಾಲವನ್ನು ಫ್ರುಟ್ಸ್ ಆಪ್ ಮೂಲಕ ನೋಂದಾಯಿಸಿದ ಬಳಿಕವೇ ನೀಡಬೇಕೆಂದು ಸೂಚನೆ ನೀಡಿತ್ತು. ಆದರೆ ಫ್ರುಟ್ಸ್ ತಂತ್ರಾಂಶದ ತರಬೇತಿ ಕಾರ್ಯ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಆಗಿರದಿದ್ದುದರಿಂದ ತಂತ್ರಾಂಶ ಬಳಕೆ ಕಷ್ಟವಾಗಿತ್ತು.‌ ಅಲ್ಲದೆ ಸಹಕಾರಿ ಸಂಘಗಳಿಗೆ ಅಡಮಾನ ಸಾಲಕ್ಕೆಂದು ಕೃಷಿಕರು ಸಲ್ಲಿಸಿದ್ದ ಕಡತ ಪೆಂಡಿಂಗ್ ಆಗತೊಡಗಿತು. ಆ ಬಳಿಕ ದ.ಕ. ಜಿಲ್ಲೆಯಿಂದ ಸಹಕಾರ ಭಾರತೀ ಜಿಲ್ಲಾ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಸಹಿತ ಹಲವರು ಕೃಷಿಕರಿಗೆ ಆ್ಉತ್ತಿರುವ ಸಮಸ್ಯೆಯ ಕುರಿತು ಸಹಕಾರ ಸಚಿವರ ಗಮನ ಸೆಳೆದಿದ್ದರು. ಇದೀಗ ಸಹಕಾರ ಸಚಿವರ ಸೂಚನೆ ಮೇರೆಗೆ ಸರಕಾರದ ಅಧೀನ ಕಾರ್ಯದರ್ಶಿ ಯವರು ಈ ಹಿಂದಿನಂತೆ ಅಡಮಾನ ಸಾಲ ವಿತರಿಸಲು ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.