Breaking News

ಕಾಂತಮಂಗಲ ಶಾಲೆಯಲ್ಲಿ ಸೋಲಾರ್ ಆಧಾರಿತ ಡಿಜಿಟಲ್ ಕ್ಲಾಸ್ ರೂಂ ಉದ್ಘಾಟನೆ

Advt_Headding_Middle

 

 

ಅಜ್ಜಾವರ ಗ್ರಾಮದ ಕಾಂತಮಂಗಲ ಸ.ಉ.ಹಿ ಪ್ರಾ ಶಾಲೆಯಲ್ಲಿ ಸೆಲ್ಕೋ ಸೋಲಾರ್ ಸುಳ್ಯ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ನಿರ್ಮಿತವಾದ ಸೋಲಾರ್ ಆಧಾರಿತ ಡಿಜಿಟಲ್ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಜ.6 ರಂದು ನಡೆಯಿತು .

ಉದ್ಘಾಟನೆಯನ್ನು ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷರಾದ ಲಕ್ಷ್ಮೀಶ ರೈ ನೆರವೇರಿಸಿದರು.
ಸ್ಮಾರ್ಟ್ ಟಿವಿ ಯ ಅನಾವರಣವನ್ನು ಚಿದಾನಂದ ಹನಿಯಡ್ಕ ರವರು ನೆರವೇರಿಸುವುದರ ಮೂಲಕ ಲೋಕಾರ್ಪಣೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ವಾದ್ಯವೃಂದದೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತಂದರು .
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಸುಳ್ಯದ ಖ್ಯಾತ ಉದ್ಯಮಿ ಗಣೇಶ್ ಜಿ ನಾಯಕ್ ನೆರವೇರಿಸಿ ಶುಭಹಾರೈಸಿದರು . ಈ ಸಂದರ್ಭದಲ್ಲಿ ಆರ್ಥಿಕ ಸಹಕಾರ ನೀಡಲು ಸಹಕರಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನಮೋಹನ ಪುತ್ತಿಲ ಮತ್ತು ಆನಂದರಾವ್ ಕಾಂತಮಂಗಲ ಇವರನ್ನು ಸನ್ಮಾನಿಸಲಾಯಿತು .ವೇದಿಕೆಯಲ್ಲಿ ಸೆಲ್ಕೋ ಸೋಲಾರ್ ನ ಸುಳ್ಯ ಮ್ಯಾನೇಜರ್ ಆಶಿಕ್, ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ಜಯರಾಮ , ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಉಪಸ್ಥಿತರಿದ್ದರು . ಶಾಲಾ ಪ್ರಭಾರ ಮುಖ್ಯೋಪಾಧ್ಯಯರಾದ ಶ್ರೀಮತಿ ಮೋಹಿನಿ ಕೆ ಜಿ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಜಯಶೀಲ ವಂದಿಸಿದರು.ಪದವೀಧರ ಪ್ರಾಥಮಿಕ ಶಿಕ್ಷಕಿ ಶ್ರೀಮತಿ ಆಶಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು . ಶಿಕ್ಷಕರಾದ ಧನಂಜಯ ಮತ್ತು ಶ್ರೀಮತಿ ಗಿರಿಜಾಂಬ ಸಹಕರಿಸಿದರು . ಶಾಲಾ ವಿದ್ಯಾರ್ಥಿಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ನಡೆಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.