Breaking News

ಭ್ರಷ್ಟಾಚಾರ ವಿರೋಧಿ ಆಂದೋಲನ : ಪೂರ್ಣ ಬೆಂಬಲದೊಂದಿಗೆ ಪಾಲ್ಗೊಳ್ಳುವಿಕೆಗೆ ಅರಂತೋಡು ಗ್ರಾ.ಪಂ. ಸದಸ್ಯರ ನಿರ್ಧಾರ

Advt_Headding_Middle

ಅರಂತೋಡು ಗ್ರಾ.ಪಂ.ನ ಮಾಸಿಕ ಸಭೆ ಇಂದು ನಡೆದಿದ್ದು, ಸುದ್ದಿ ಬಳಗದ ನೇತೃತ್ವದಲ್ಲಿ ಆರಂಭಗೊಂಡಿರುವ ಭ್ರಷ್ಟಾಚಾರ ವಿರೋಧಿ ಜನಾಂದೋಲನಕ್ಕೆ ಪೂರ್ಣ ಬೆಂಬಲ ನೀಡಲು ಮತ್ತು ಪಾಲ್ಗೊಳ್ಳಲು ಗ್ರಾ.ಪಂ. ಸದಸ್ಯರು ನಿರ್ಧರಿಸಿದ್ದಾರೆ.
ಗ್ರಾ.ಪಂ. ಸಭೆಗೆ ಸುದ್ದಿ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಸುದ್ದಿ ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಸುದ್ದಿ ವರದಿಗಾರರಾದ ಕೃಷ್ಣ ಬೆಟ್ಟ ಹಾಗೂ ಶರೀಫ್ ಜಟ್ಟಿಪಳ್ಳರವರು ಭಾಗವಹಿಸಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಅವಶ್ಯಕತೆ ಮತ್ತು ವಿಧಾನದ ಬಗ್ಗೆ ಸದಸ್ಯರಿಗೆ ವಿವರಿಸಿದರು.
ಆ ಸಂದರ್ಭ ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳರವರು ಮಾತನಾಡಿ, ಭ್ರಷ್ಟಾಚಾರ ವಿರುದ್ಧದ ಜನಾಂದೋಲನ ಅತ್ಯುತ್ತಮ ಕಾರ್ಯ. ಅರಂತೋಡು ಗ್ರಾಮ ಪಂಚಾಯತ್ ಆಂದೋಲನವನ್ನು ಬೆಂಬಲಿಸುತ್ತದೆ ಎಂದು ಹೇಳಿದರು. ಬಳಿಕ ಗ್ರಾ.ಪಂ. ಅಧ್ಯಕ್ಷೆ ಹರಿಣಿ ದೇರಾಜೆಯವರಿಗೆ ಫಲಕ ಹಸ್ತಾಂತರಿಸಲಾಯಿತು. ಉಪಾಧ್ಯಕ್ಷರು, ಪಿಡಿಒ ಹಾಗು ಹಾಜರಿದ್ದ ಎಲ್ಲಾ ಸದಸ್ಯರು ಭ್ರಷ್ಟಾಚಾರ ವಿರುದ್ಧದ ಫಲಕವನ್ನು ದುಡ್ಡುಕೊಟ್ಟು ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.