Breaking News

ಸ್ವಾಮಿ ವಿವೇಕಾನಂದ ಜನ್ಮದಿನದಂದು ಮಂಡೆಕೋಲಿನ ಅಯ್ಯಪ್ಪ ಮಾಲಾಧಾರಿಗಳಿಂದ ಪಂಪಾ ನದಿ ಸ್ವಚ್ಛತೆ

Advt_Headding_Middle

 

 

ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಶಂಸೆ ಅಭಿನಂದನೆ

ಸುಳ್ಯ ತಾಲೂಕಿನ ಮಂಡೆಕೋಲಿನಿಂದ ಶಬರಿಮಲೆಗೆ ತೆರಳಿದ ಅಯ್ಯಪ್ಪ ಮಾಲಾಧಾರಿಗಳ ತಂಡ ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಜನವರಿ 12 ರಂದು ಶಬರಿಮಲೆ ಪಂಪಾ ನದಿಯ ಸ್ವಚ್ಛತಾ ಕಾರ್ಯ ನಡೆಸಿ ದೇವಸ್ವಂ ಬೋರ್ಡ್ ಹಾಗೂ ಕೇರಳ ಪೊಲೀಸರಿಂದ ಶ್ಲಾಘನೆಗೆ ಒಳಪಟ್ಟಿದೆ.

ಇತ್ತೀಚೆಗಷ್ಟೇ ಪುನಃ ಪ್ರತಿಷ್ಠೆಗೊಂಡ ಕಣೆಮರಡ್ಕ ಶಬರಿಗಿರಿ ಸೇವಾ ಪ್ರತಿಷ್ಠಾನದ ಶ್ರೀ ಅಯ್ಯಪ್ಪ ಮಂದಿರದಲ್ಲಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಮಾಡಿ ಸನ್ನಿದಾನದಿಂದ ಮರಳಿದ ತಂಡ ಅಪರಾಹ್ನದ ಬಳಿಕ ವೀರಕೇಸರಿ ಸಮವಸ್ತ್ರ ಧರಿಸಿ ಪಂಪಾ ನದಿ ಹಾಗೂ ದಡವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗಿತು ಪಂಪಾ ಪೊಲೀಸರಿಂಸ ಸ್ವಚ್ಛತೆಯ ಮಾಹಿತಿ ಪಡಕೊಂಡ ಹಿರಿಯ ಪೊಲೀಸ್ ಅಧಿಕಾರಿ ಪುಣ್ಯ ಪೂಂಗಾವನಂ ಆಂದೋಲನದ ಪ್ರಮುಖರೂ ಆದ ಡಿಜಿಪಿ ಪಿ. ವಿಜಯನ್ ಐಪಿಎಸ್ ಸಂಜೆ ವೇಳೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಖುದ್ದು ಸ್ಥಳಕ್ಕಾಗಮಿಸಿ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಪುಣ್ಯ ಪೂಂಗಾವನಂ ಆಂದೋಲನದ ಸಮವಸ್ತ್ರವನ್ನು ತಂಡಕ್ಕೆ ನೀಡಿ ತಾವೂ ಕೂಡ ಕೈಗೆ ಗ್ಲೌಸ್ ತೊಟ್ಟು ಸ್ವತಃ ಸ್ವಚತೆಗಿಳಿದರು.ಜೊತೆಗೆ ತಂಡದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು.

ಶಬರಿಮಲೆ ವಿಶೇಷಾಧಿಕಾರಿ ದಿಲೀಪ್ ಕುಮಾರ್ ಐಪಿಎಸ್ ಹಾಗೂ ಪಂಪಾ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.