ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಆಂಬ್ಯುಲೆನ್ಸ್ ಖರೀದಿಸುವ ಯೋಜನೆಗೆ ಮಡಪ್ಪಾಡಿ ಪ್ರಾ. ಕೃ.ಪ. ಸ. ಸಂಘ ವತಿಯಿಂದ ಮತ್ತು ಸಿಬ್ಬಂದಿಗಳ ಪರವಾಗಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿರವರು ಸಹಾಯ ಧನ ವಿತರಿಸಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಶುಭ ಹಾರೈಸಿದರು.
ಈ ಸಂದರ್ಭದಲ್ಲಿ , ಸಿಬ್ಬಂದಿಗಳಾದ ಸುನಿಲ್ ಮಡಪ್ಪಾಡಿ, ವಿಶ್ವನಾಥ ಕಜೆ, ನವೀನ ಎಂ ಸಿ, ಚಿನ್ನಪ್ಪ ನಡುಬೆಟ್ಟು , ಶ್ರೀಮತಿ ಕವಿತಾ ಯನ್, ಸದಸ್ಯರುಗಳಾದ ಶ್ರೀಮತಿ ರೀತಾ ಪ್ರಕಾಶ್,ಕಡಬ ಗಂಗಾಧರ ಕುತ್ಯಾಳ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಸುಕುಮಾರ್ ಕೋಡೊಂಬು ಉಪಸ್ಥಿತರಿದ್ದರು.