Breaking News

ಸುಬ್ರಹ್ಮಣ್ಯ : ‘ಯುವ ಸಪ್ತಾಹ’ ಕಾರ್ಯಕ್ರಮ

Advt_Headding_Middle

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ‘ಯುವ ಸಪ್ತಾಹ’ ಕಾರ್ಯಕ್ರಮ ನಡೆಯಿತು.
‘ಅಖಂಡ ಭಾರತ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಸಂಶೋಧಕ ಮಹೇಶ್ ತುಪ್ಪೆಕಲ್ಲು ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಡಾ|| ಗೋವಿಂದ ಎನ್.ಎಸ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂಶೋಧನಾ ವಿದ್ಯಾರ್ಥಿಗಳಾದ ಫರದ್ ಸುಲ್ತಾನ್ ಅಪಘಾನಿಸ್ತಾನ ಮತ್ತು ಮುಸ್ಲಿಂ ಹಜಾರಿಕ ನೈಜೀರಿಯಾ ಇವರು ಉಪಸ್ಥಿತರಿದ್ದರು. ಅಂತಿಮ ವಾಣಿಜ್ಯ ವಿಭಾಗದ ಜೀವನ್ ಸ್ವಾಗತಿಸಿ, ಅಂತಿಮ ವಾಣಿಜ್ಯ ಪದವಿ ಸಿಂಚನ ಬಿ ವಂದಿಸಿದರು. ರಕ್ಷಿತಾ ಎನ್‌ಆರ್ ಅಂತಿಮ ಕಲಾ ಪದವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜನೆಯನ್ನು ಕಾಲೇಜು ಉಪನ್ಯಾಸಕರಾದ ಸ್ವಾತಿ ಕೆ, ಕುಮಾರ್ ಹಾಗೂ ಶಿವಪ್ರಸಾದ್ ಎಸ್. ನಡೆಸಿಕೊಟ್ಟರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.