ಜಾಲ್ಸೂರು ಗ್ರಾಮದಲ್ಲಿ ಗ್ರಾ.ಪಂ. ನಿಂದ ಅಭಿವೃದ್ಧಿ ಕೆಲಸಗಳು ಆಗದ ಹಿನ್ನೆಲೆ

Advt_Headding_Middle
Advt_Headding_Middle

 

ಜ.19ರಂದು ನಡೆಯುವ ವಿಶೇಷ ಗ್ರಾಮಸಭೆ ಬಹಿಷ್ಕಾರಕ್ಕೆ ಗ್ರಾಮ ನಾಗರಿಕರ ನಿರ್ಧಾರ
ಜಾಲ್ಸೂರು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಪ್ರತೀ ಗ್ರಾಮ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದು, ಕೇವಲ ಭರವಸೆಯೇ ಹೊರತು ಇದುವರೆಗೆ ಯಾವುದೇ ಸಮಸ್ಯೆಗಳು ಇತ್ಯರ್ಥ ಆಗದೇ ಇರುವದರಿಂದ ಜ.19ರಂದು ನಡೆಯುವ ವಿಶೇಷ ಗ್ರಾಮಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮದ ನಾಗರಿಕರು ತಿಳಿಸಿದ್ದಾರೆ.
ಜಾಲ್ಸೂರು ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದು, ಮುಖ್ಯವಾಗಿ ಮರಸಂಕ ಅಂಗನವಾಡಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಇತ್ಯರ್ಥ ಪಡಿಸುವಲ್ಲಿ ಸಂಬಂಧ ಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಹಿನ್ನಡೆಯನ್ನು ಸಾಧಿಸುತ್ತಿದೆ. ಮಾತ್ರವಲ್ಲದೆ ಪಂಚಾಯತ್ ಗೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವು ಕೆಲಸಗಳು ಇನ್ನೂ ಹಾಗೇ ಉಳಿದಿದೆ. ಇದರಿಂದ ಬೇಸತ್ತಿರುವ ಗ್ರಾಮದ ನಾಗರಿಕರು ಜ.19ರಂದು ಗ್ರಾಮ ಪಂಚಾಯತಿಯಲ್ಲಿ ನಡೆಯಲಿರುವ ವಿಶೇಷ ಗ್ರಾಮ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.