Breaking News

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್  ನ ಸಾರ್ವಜನಿಕ ಆಂಬ್ಯುಲೆನ್ಸ್ ಲೋಕಾರ್ಪಣೆ

Advt_Headding_Middle

 

 

ಸಾರ್ವಜನಿಕ ಉಪಯೋಗಕ್ಕಾಗಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ದೇಣಿಗೆಯ ಮೂಲಕ ಖರೀದಿಸಲು ಯೋಜಿಸಿದ್ದ ಮಹತ್ವದ ಆಂಬ್ಯುಲೆನ್ಸ್ ಯೋಜನೆ ಜ. 14 ರಂದು ಲೋಕಾರ್ಪಣೆ ಗೊಂಡಿತು.

ಸುಳ್ಯ ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ತೆಂಗಿನಕಾಯಿ ಒಡೆದರು. ಮಾ। ಚೇತನ್ ಮುಂಡೋಡಿ ಕೀ ಹಸ್ತಾಂತರಿಸಿದರು. ನಿವೃತ್ತ ಎಸ್ ಐ ಸುಬ್ಬಣ್ಣ ಗೌಡ ಆಂಬ್ಯೂಲೆನ್ಸ್ ಚಾಲನೆ ಮಾಡಿದರು.

ಈ ಸಂದರ್ಭ ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ, ಜಯರಾಮ ದೇರಪಜ್ಜನ ಮನೆ, ಡಾ. ಚೈತ್ರಾಭಾನು , ಮುಳಿಯ ಕೇಶವ ಭಟ್, ಫಾ. ಆದರ್ಶ ಜೋಸೆಫ್‌ , ಕೇಶವ ಹೊಸೊಳಿಕೆ, ಗದಾಧರ ಬಾಳುಗೋಡು, ಪ್ರದೀಪ್ ಕುಮಾರ್ ಕುಂಞೆಟ್ಟಿ, ಯೋಗೀಶ್ ಹೊಸೊಳಿಕೆ, ಪ್ರಮೀಳಾ ಶಶಿದರ ಕೋಲ್ಯ, ಟ್ರಸ್ಟ್ ನ ಸುಪ್ರಿತ್ ಗುಡ್ಡೆಮನೆ, ಮೋಹನ್ ಶಿರಾಜೆ, ಯತೀಂದ್ರ ಕಟ್ಟಕೋಡಿ, ಸುಕುಮಾರ ಕಂದ್ರಪ್ಪಾಡಿ, ವಿಶ್ವನಾಥ ಆಚಳ್ಳಿ ಉಪಸ್ಥಿತರಿದ್ದರು.
ಈ ಸಂದರ್ಭ ವೀರ ಮಾರುತಿ ಸ್ಪೋರ್ಟ್ ಕ್ಲಬ್ ಗುತ್ತಿಗಾರು ವತಿಯಿಂದ ಧನ ಸಹಾಯ ನೀಡಲಾಯಿತು. ಟ್ರಸ್ಟ್‌ ನ ಅಧ್ಯಕ್ಷ ಚಂದ್ರಶೇಖರ ಕಡೋಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ಕಾರ್ಯದರ್ಶಿ ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.