14ನೇ ಹಣಕಾಸಿನ ಅನುದಾನದಿಂದ ಆಲೆಟ್ಟಿ ಗ್ರಾಮ ಪಂಚಾಯತಿನ ಎರಡನೇ ವಾರ್ಡಿನ ಬಿಲ್ಲರಮಜಲು ಪರಿಶಿಷ್ಟ ಪಂಗಡದ ಕಾಲೋನಿ ಎಂಬಲ್ಲಿಗೆ ಸೋಲಾರ್ ದೀಪವನ್ನು ಇಡಲಾಗಿತ್ತು. ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ , ಗೀತ ಕೊಲ್ಚಾರು ಮತ್ತು ಕುಸುಮಾ ಭಿಲ್ಲರ ಮಜಲು ರವರ ವಿಶೇಷ ಮುತುವರ್ಜಿವಹಿಸಿ ಸೋಲಾರ್ ದೀಪವನ್ನು ಅಳವಡಿಸಿ ಕೊಟ್ಟಿರುತ್ತಾರೆ.
ಈ ಸೋಲಾರ್ ದೀಪವನ್ನು ಅಳವಡಿಸುವ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಕುಸುಮ ಬಿಲ್ಲರಮಜಲು ಹಾಗೂ ಸ್ಥಳೀಯರಾದ ಗೋಪಾಲ ನಾಯ್ಕ ಬಿಲ್ಲರಮಜಲು, ದಿನೇಶ್ ಕುಂಭಕ್ಕೊಡು ಚನಿಯಪ್ಪ ನಾಯ್ಕ ಬಿಲ್ಲರಮಜಲು ರವರುಗಳು ಉಪಸ್ಥಿತರಿದ್ದರು.