ಇತ್ತೀಚೆಗೆ ಅಗಲಿದ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರ ಅವಿನಾಶ್ ಸಂಸ್ಥೆಯ ದಿ. ನಾರಾಯಣ ರೈ ಸ್ಮರಣಾರ್ಥ ಯೋಜನೆ ಅನುಷ್ಠಾನಗೊಳಿಸಲು ಮತ್ತು ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅವರ ಹಿತೈಷಿಗಳು ಮತ್ತು ಅವರ ಸಂಪರ್ಕ ಕ್ರಾಂತಿಯಿಂದ ಪ್ರಯೋಜನ ಪಡೆದ ಊರವರು ನಿರ್ಧರಿಸಿದ್ದಾರೆ.
ಜ. ೧೫ರಂದು ಸುಳ್ಯ ಸಿ.ಎ. ಬ್ಯಾಂಕ್ ಸಭಾಭವನದಲ್ಲಿ ಸಾಮಾಜಿಕ ಕಾರ್ಯಕರ್ತ ರಾಜೇಶ್ ಶೆಟ್ಟಿ ಮೇನಾಲ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಯಿತು.
ಆನಂದ ರಾವ್ ಕಾಂತಮಂಗಲ, ಕೇಶವಪ್ರಸಾದ್ ತೊಡಿಕಾನ, ಸಂತೋಷ್ ಕುತ್ತಮೊಟ್ಟೆ, ನವೀನ್ ರೈ ಮೇನಾಲ, ಸುಬೋಧ್ ಶೆಟ್ಟಿ ಮೇನಾಲ, ದುರ್ಗಾಕುಮಾರ್ ನಾಯರ್ಕೆರೆ, ಸುರೇಶ್ ಕಣೆಮರಡ್ಕ, ರಾಮಯ್ಯ ರೈ ದೇಲಂಪಾಡಿ, ಬಾಲಕೃಷ್ಣ ಪೂಜಾರಿ, ಜಗನ್ನಾಥ ರೈ ಪಡ್ಡೈಬನ , ಉಮಾಶಂಕರ ಅಡ್ಯಡ್ಕ, ತಿಮ್ಮಯ್ಯ ತೊಡಿಕಾನ, ಕೇಶವ ಕೊಳಲುಮೂಲೆ, ಮಹೇಶ್ ರೈ ಮೇನಾಲ ಮೊದಲಾದವರು ಮಾತನಾಡಿ, ಸಲಹೆ ಸೂಚನೆಗಳನ್ನಿತ್ತರು.
ಎ.ಎಸ್. ಮನ್ಮಥ ಅಡ್ಪಂಗಾಯ, ಕರುಣಾಕರ ಅಡ್ಪಂಗಾಯ, ರಮೇಶ್ ಅಡ್ಪಂಗಾಯ, ಗುರುಪ್ರಸಾದ್ ರೈ ಪೇರಾಲು, ನಾರಾಯಣ ಬಂಟ್ರಬೈಲು, ವಿಕ್ರಂ ಅಡ್ಪಂಗಾಯ, ಮೋಹನ್ದಾಸ್ ಪೇರಾಲು ಮೊದಲಾದವರು ಸಭೆಯಲ್ಲಿದ್ದರು. ಕಾರ್ಯಕ್ರಮ ನಡೆಸುವ ದಿನ ಶಾಶ್ವತ ನೆನಪಿಗಾಗಿ ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮಕ್ಕಾಗಿ ದಿ. ನಾರಾಯಣ ರೈ ಸಂಸ್ಮರಣಾ ಸಮಿತಿ ರಚಿಸಿ ಸಮಿತಿಯನ್ನು ಇನ್ನಷ್ಟು ವಿಸ್ತರಿಸುವುದಾಗಿ ನಿರ್ಧರಿಸಲಾಯಿತು. ರಾಜೇಶ್ ಶೆಟ್ಟಿ ಮೇನಾಲ ಸ್ವಾಗತಿಸಿ, ವಂದಿಸಿದರು.