ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ನ ಆಶ್ರಯದಲ್ಲಿ ಮೂಡಿಗೆರೆ ಲಯನ್ಸ್ ಕ್ಲಬ್ನೊಂದಿಗೆ ಆಯೋಜನೆಗೊಂಡ ಇಂಟರ್ ಕ್ಲಬ್ ಸಮ್ಮಿಲನದ ಸಂದರ್ಭದಲ್ಲಿ ಲಯನ್ಸ್ ಇಂಟರ್ ನ್ಯಾಶನಲ್ ಸ್ಥಾಪಕರಾದ ಮೆಲ್ವಿನ್ ಜೋನ್ಸ್ ರವರ ಹುಟ್ಟುದಿನವನ್ನು ಸ್ಥಾಪಕರ ದಿನಾಚರಣೆಯನ್ನಾಗಿ ಜ.12 ರಂದು ಆಚರಿಸಲಾಯಿತು.
ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಜಯರಾಂ ದೇರಪ್ಪಜ್ಜನಮನೆರವರು ಸ್ಥಾಪಕಾಧ್ಯಕ್ಷರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ದೀಪ ಬೆಳಗಿ ಲಯನ್ಸ್ ಕ್ಲಬ್ ಆರಂಭಗೊಂಡ ಬಗ್ಗೆ ಹಾಗೂ ಮೆಲ್ವಿನ್ ಜೋನ್ಸ್ ರವರ ಕುರಿತು ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ಸ್ ಮಾಜಿ ವಲಯಾಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ದೀಪ ಬೆಳಗಿ ಗೌರವ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಸ್ಥಾಪಕರ ಸ್ಮರಣಾರ್ಥವಾಗಿ ಇತ್ತೀಚೆಗೆ ಸೈಕಲ್ ಅಪಘಾತಕ್ಕೊಗೊಳಗಾಗಿ ಬೆನ್ನು ಹುರಿ ಮುರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಕುಮಾರ ಶಾಲೆಯ ಎಸ್ ಎಸ್ ಎಲ್ ಸಿ ಕಲಿಕಾ ನಿರತ ಬಡವಿದ್ಯಾರ್ಥಿ, ಸಾಯಿದರ್ಶನ್ ಕುಲಕರ್ಣಿಯ ಹೆತ್ತವರಿಗೆ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ರೂ ೨೫ ಸಾವಿರ ಹಾಗೂ ಮೂಡಿಗೆರೆ ಲಯನ್ಸ್ ಕ್ಲಬ್ ನ ಪರವಾಗಿ ರೂ ೯೫೦೦/- ನ್ನು ಧನಸಹಾಯವನ್ನಾಗಿ ವಿತರಿಸಲಾಯಿತು. ಸಭಾಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರೊ. ರಂಗಯ್ಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂತ್ಯ ೧೧ರ ವಲಯಾಧ್ಯಕ್ಷ ಗೋಪಾಲ್ ಗೌಡ, ಮೂಡಿಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ ಎಲ್ ರಂಗನಾಥ್ ಗೌಡ, ಕುಕ್ಕೇ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ್ ಕೂಜುಗೋಡು ಮತ್ತು ಖಜಾಂಜಿ ರಾಮಚಂದ್ರ ಪಳಂಗಾಯ ಉಪಸ್ಥಿತರಿಧ್ದರು. ಉಪಾಧ್ಯಕ್ಷ ರಾಜೇಶ್ ಎನ್. ಎಸ್. ಸ್ವಾಗತಿಸಿ, ಮೂಡಿಗೆರೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.