ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇಂದು ಎಸ್ಸಿ ಎಸ್ಟಿ ಕುಂದುಕೊರತೆ ಸಭೆ ನಡೆಯಿತು. ಈ ಸಭೆಯಲ್ಲಿ ಬೆಳ್ಳಾರೆ ಠಾಣೆಯ ಎ.ಎಸ್ .ಐ.ಭಾಸ್ಕರ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಸುಧಾಕರ, ನಾರಾಯಣ,ಎ.ಎಸ್.ಐ. ಬಾಲಕೃಷ್ಣ, ಹೆಡ್ ಕಾನ್ಸ್ಟೇಬಲ್ ಜ್ಯೋತಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಸ್ಕರ್ ಬೀಟ್ ಮಾಹಿತಿ 112 ಬಗ್ಗೆ ಮಾಹಿತಿ ನೀಡಿದರು. ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಘಟನೆಗಳು ದಿನೇ ದಿನೇ ಜಾಸ್ತಿ ಆಗುವ ನಿಟ್ಟಿನಲ್ಲಿ ಮಕ್ಕಳ ಪೋಷಕರು ಹೆಚ್ಚಿನ ಜಾಗೃತಿ ವಹಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ನಂತರ ಹೆಡ್ ಕಾನ್ಸ್ಟೇಬಲ್ ಜ್ಯೋತಿ ಮಾತನಾಡಿ ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಈಗಾಗಲೇ ಹೆಚ್ಚಾಗುತ್ತಿದೆ ಆದಕಾರಣ ಕಾಲೋನಿಗಳಿಗೆ ಭೇಟಿ ನೀಡಿ ಹೆಣ್ಣು ಮಕ್ಕಳನ್ನು ಸಭೆಗೆ ಕರೆದು ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳು ನಡೆಯಬೇಕು ಎಂದು ಹೆಡ್ ಕಾನ್ಸ್ಟೇಬಲ್ ಜ್ಯೋತಿ ಮಾಹಿತಿ ನೀಡಿದರು. ಸಭೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಮಾತನಾಡಿ ದಲಿತರ ಮೇಲೆ ಮೇಲ್ವರ್ಗದವರಿಂದ ದೌರ್ಜನ್ಯ ಆಗಿ ಅಟ್ರಾಸಿಟಿ ಕೇಸು ದಾಖಲಾದ ತಕ್ಷಣ ಅಪರಾಧಿಯನ್ನು ಬಂಧನ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆರ್ಡರ್ ಮಾಡಿದೆ ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸಂದರ್ಭದಲ್ಲಿ ಅಟ್ರಾಸಿಟಿ ಕೇಸ್ ಆದರೂ ಕೂಡ ಆರೋಪಿಗಳ ಬಂಧನ ವಾಗುವುದಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಚೆನ್ನಕೇಶವ,ರಾಧಾಕೃಷ್ಣ,ಸುನಿಲ್,ಸತೀಶ, ತೀರ್ಥ ಕುಮಾರ,ಶರತ್, ಜೀವನ್, ರೋಹಿತ್, ಆನಂದ ರಂಗತಮಲೆ, ಆಕಾಶ್, ಶಿವ, ಕೊರಗಪ್ಪ, ಭಾಸ್ಕರ ಅಡ್ಕಾರ್, ರಾಜೇಶ್ ಅಡ್ಕಾರ್,ರವಿ ಮಂಡೆಕೋಲು,ಜಯರಾಮ ಮಂಡೆಕೋಲು,ಸೀತಾರಾಮ,ಬಾಬು, ರಾಧಿಕಾ,ಸುಂದರಿ,ಸವಿತಾ ಮೊದಲಾದವರು ಭಾಗವಹಿಸಿದ್ದರು.