ಆಲೆಟ್ಟಿ ಗ್ರಾಮದ ಕುದ್ಕುಳಿ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಸಪರಿವಾರ ದೈವಸ್ಥಾನದಲ್ಲಿ ಜ.22 ಮತ್ತು 23 ರಂದು ನೇಮೋತ್ಸವವು ನಡೆಯಲಿರುವುದು.ಜ.22 ರಂದು ಬೆಳಗ್ಗೆ ಗಣಪತಿ ಹವನವಾಗಿ ಉಗ್ರಾಣ ತುಂಬಿಸಿ ಪ್ರತಿಷ್ಠಾ ತಂಬಿಲ ಸೇವೆಯಾಗಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ ಶ್ರೀ ದೈವಗಳ ತೊಡಂಞಲ್ ಬಳಿಕ ಕುಲ್ಚಾಟ ನಡೆದು ಅನ್ನಸಂತರ್ಪಣೆ ಯಾಗಲಿದೆ.
ರಾತ್ರಿ ಭೂಮಿ ಗುಳಿಗ ದೈವದ ನೇಮೋತ್ಸವವಾಗಲಿರುವುದು. ಮರುದಿನ ಬೆಳಗ್ಗೆ ಶ್ರೀ ರಕ್ತೇಶ್ವರಿ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ಯಾಗಿ ಅನ್ನಸಂತರ್ಪಣೆ ಆಗಲಿರುವುದು.