ಜ. 20ರ ತನಕ ಬಳ್ಪ – ನೇರ್ಪು ಉಳ್ಳಾಕುಲು, ಶಿರಾಡಿ ರಾಜನ್ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಳ್ಪ ಗ್ರಾಮದ ಬಳ್ಪ – ಕೇನ್ಯ ಗ್ರಾಮಗಳ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ರಾಜನ್ ದೈವ ನೇರ್ಪು ಮಾಲ್ಯ ಇದರ ಪುನರ್ ಪ್ರತಿಷ್ಠಾ ಮಹೋತ್ಸವ ಜ. 16ರಿಂದ ಜ. 20 ರ ತನಕ ಕೋವಿಡ್ ನಿಯಮ ಪಾಲನೆಯೊಂದಿಗೆ ಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರ ನೇತೃತ್ವದಲ್ಲಿ ಜರಗಲಿದೆ.

ಜ. 16ರಂದು ಸಂಜೆ ವಿವಿಧ ವೈದಿಕ ಕಾರ್ಯಗಳು ನಡೆಯಿತು. ಇಂದು ಪೂ. 8.45ಕ್ಕೆ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಜ. 18ರಂದು ರಾತ್ರಿ 9.30ರ ಬಳಿಕ ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ಭಂಡಾರ ತೆಗೆದು ನೇಮೋತ್ಸವ ಆರಂಭಗೊಂಡು ಜ. 19ರಂದು ಪೂ. 8.00 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ 8.30ಕ್ಕೆ ಶಿರಾಡಿ ರಾಜನ್ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ನೇಮೋತ್ಸವ ಆರಂಭಗೊಂಡು ಜ. 20ರಂದು ಬೆಳಿಗ್ಗೆ 8.30ಕ್ಕೆ ದೈವಗಳ ಪೂವರಿ ನಡೆದು ಮಧ್ಯಾಹ್ನ 12.30ಕ್ಕೆ ಗಡಿಗೆ ಹೋಗುವ ಕಾರ್ಯಕ್ರಮ ಜರಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.